Latestಉತ್ತರ ಕನ್ನಡಜಿಲ್ಲಾ ಸುದ್ದಿಮನರಂಜನೆಸಿನಿಮಾಸೆಲೆಬ್ರಿಟಿ

Actor Diganth: ನೇತ್ರಾಣಿ ನಡುಗಡ್ಡೆಯಲ್ಲಿ ನಟ ದಿಗಂತ್ ಸ್ಕೂಬಾ ಡೈವ್

ಕಾರವಾರ : ರಾಜ್ಯದ ಏಕೈಕ ಸ್ಕೂಬಾಡೈ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಯಾಂಡಲ್​​ವುಡ್ ನಟ ದಿಗಂತ್ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಸಹಕಾರದೊಂದಿಗೆ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದರು.

ಹತ್ತು ಮೀಟರ್ ಆಳಕ್ಕೆ ತೆರಳಿ ವಿವಿಧ ಭಂಗಿಯಲ್ಲಿ ಸಮುದ್ರದಾಳದಲ್ಲಿ ಈಜಿದ ಅವರು ಸ್ಕೂಬಾ ಡೈಗಾಗಿ ಮಾಲ್ಡೀವ್ಸ್ ನಲ್ಲಿ ತರಬೇತಿ ಪಡೆದಿದ್ದರು. ಹೀಗಾಗಿ ಮುರ್ಡೇಶ್ವರದ ನೇತ್ರಾಣಿಯ ನಡುಗಡ್ಡೆಗೆ ತೆರಳಿದ ಅವರು ಅರಬ್ಬಿ ಸಮುದ್ರದಲ್ಲಿ ಆಕ್ಸಿಜನ್ ಸಿಲೆಂಡರ್ ಹಾಕಿಕೊಂಡು ಡೈ ಮಾಡಿದರು.

ನಂತರ ಸಮುದ್ರದಾಳದ ಜಲಚರಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದರು. ಕುಟುಂಬದೊಂದಿಗೆ ಬಂದಿದ್ದ ದಿಗಂತ್ ಹಲವು ವರ್ಷದ ನಂತರ ವೀಕೆಂಡ್ ಮಸ್ತಿಗಾಗಿ ತಂದೆ ಕೃಷ್ಣಮೂರ್ತಿ ಮಂಚಾಲೆ, ತಾಯಿ ಮಲ್ಲಿಕಾ ಜೊತೆ ಪತ್ನಿ ಐಂದ್ರಿತಾ ಸಹೋದರನೊಂದಿಗೆ ಆಗಮಿಸಿದ್ದ ಅವರು ಇದೇ ಮೊದಲ ಬಾರಿ ಮುರ್ಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವ್ ಮಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button