Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ಭದ್ರತಾ ಲೋಪ, ರೈತರ ಪ್ರತಿಭಟನೆ, ಪ್ರಧಾನಿ ಮೋದಿ ಪಂಜಾಬ್ ಕಾರ್ಯಕ್ರಮ ಧಿಡೀರ್ ರದ್ದು !

Security Breach in Pm Modi Convey ಅಮೃತಸರ : ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ  ಪಂಜಾಬ್ ಕಾರ್ಯಕ್ರಮ ರದ್ದಾಗಿದೆ. ಪ್ರಧಾನಿ ಬೆಂಗಾಗಲು ವಾಹನ  ಪಂಜಾಬಿನ  ಮೇಲು  ಸೇತುವೆಯಲ್ಲಿ 20 ನಿಮಿಷ ಸಿಕ್ಕಿಕೊಂಡು, ಪ್ರಯಾಣ  ಮುಂದುವರಿಸಲಾಗದೆ ಕಡೆಗೆ  ಕಾರ್ಯಕ್ರಮನ್ನೆ ರದ್ದುಪಡಿಸಿ ದೆಹಲಿಗೆ ಮರಳಿರುವುದಕ್ಕೆ ರಾಜ್ಯದಲ್ಲಿನ  ಭದ್ರತಾ ವೈಫಲ್ಯವೇ ಕಾರಣ ಎಂದು  ಕೇಂದ್ರ ಸರ್ಕಾರ ದೂರಿದೆ. ಗಡಿಭಾಗದ ಫಿರೋಜ್ ಪುರಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕಿದ್ದ ಪ್ರಧಾನಿ ಹೆದ್ದಾರಿಯ ಮೇಲು ಸೇತುವೆಯಲ್ಲೆ  20 ನಿಮಿಷಗಳ ಕಾಲ ಕಳೆದು  ನಂತರ ಬಂದ  ದಾರಿಗೆ ಸುಂಕವಿಲ್ಲದಂತೆ  ಭಟಿಂಡಾ ವಿಮಾನ ನಿಲ್ದಾಣಕ್ಕೆ ವಾಪಸ್ಸಾದರು. 

ಕೆಲವು ಅನಿವಾರ್ಯ ಕಾರಣಗಳಿಂದ ಪ್ರಧಾನಿ ಅವರ ಕಾರ್ಯಕ್ರಮ ರದ್ದಾಗಿದೆಯೆಂದು ಕೇಂದ್ರ ಸಚಿವ  ಮನ್ಸೂಖ್ ಮಾಂಡವೀಯ  ವೇದಿಕೆಯಲ್ಲೇ  ಪ್ರಕಟಿಸಿದ್ದಾರೆ.  ಪಂಜಾಬಿನಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿ  ನಂತರ ಬಹಿರಂಗ ಸಭೆ ನಡೆಸಬೇಕಿತ್ತು

ಈ ಸಭೆಯಲ್ಲಿ ರಾಜ್ಯದ  ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ  ಬಾಗಿಯಾಗಬೇಕಿತ್ತು  ಆದರೆ ಪ್ರತಿಕೂಲ  ಹವಾಮಾನ ಮತ್ತು ಭಾರಿ  ಮಳೆಯ ಕಾರಣದಿಂದ ಸಾರ್ವಜನಿಕ ಸಭೆ ರದ್ದಾಗಿದೆ ಎಂದು ಈ ಮೊದಲು ಹೇಳಲಾಗಿತ್ತು. 

ಕೇಂದ್ರ-ರಾಜ್ಯ ಜಟಾಪಟಿ.

ಈ ನಡುವೆ ಪ್ರಧಾನಿ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮ  ರದ್ದಾಗಿರುವುದು ದೊಡ್ಡ ಸುದ್ದಿ ಮತ್ತು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರಕಾರದ ಬೇಜವಾಬ್ದಾರಿತನದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ  ನಡೆಸಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ದೂರಿದೆ.

ಮಂಗಳವಾರದಿಂದಲೇ ಪಂಜಾಬಿನ ವಿವಿಧ ಹೆದ್ದಾರಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು  ರಾಜ್ಯ ಸರ್ಕಾರಕ್ಕೆ ಈ ವಿಚಾರ ಸ್ಪಷ್ಟವಾಗಿ ಗೊತ್ತಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಭದ್ರತಾ ಲೋಪ ಎಸಗಿದೆ ಎಂದು ಬಿಜೆಪಿ ನೇರವಾಗಿ ಆರೋಪಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಪಂಜಾಬ್ ಸರ್ಕಾರದ ಭದ್ರತಾ ಲೋಪವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಭದ್ರತಾಲೋಪ ಆಗಿಲ್ಲ

ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚುನ್ನಿ , ಸರ್ಕಾರದಿಂದ ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ, ಕೇಂದ್ರ ಸರ್ಕಾರ ಪ್ರಧಾನಿ, ಸಿಬ್ಬಂದಿ  ರಸ್ತೆ ಮಾರ್ಗದ ಮೂಲಕ ಹೋಗುವ ವಿಚಾರವನ್ನು ಮೊದಲೇ   ತಿಳಿಸಿಲ್ಲ, ಕೊನೆಗಳಿಗೆಯಲ್ಲಿ ಬದಲಾವಣೆ ಮಾಡಿರುವುದಕ್ಕೆ ನಾವು ಹೊಣೆಯಲ್ಲ, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೇನು ಇಲ್ಲ  ಎಂದು ಸಮರ್ಥಿಸಿದ್ದಾರೆ.

ಭಟಿಂಡಾ ದಿಂದ ಪ್ರಧಾನಿಯವರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೆಲಿಕಾಪ್ಟರ್  ಮೂಲಕ ಹೋಗುವುದು ನಿಗದಿಯಾಗಿತ್ತು ಆದರೆ ಹಠಾತ್ತನೆ ಅವರು ರಸ್ತೆ ಮೂಲಕ ಹೋಗುವ ನಿರ್ಧಾರ ಏಕಪಕ್ಷೀಯವಾಗಿ ತೆಗೆದುಕೊಂಡಿರವುದು  ರಾಜ್ಯದ ಗಮನಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕೆಲ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದರು, ರೈತರ ಬೇಡಿಕೆ ಈಡೇರುವ ತನಕ  ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತ ನಾಯಕರು ಈ ಮೊದಲೇ ಹೇಳಿದ್ದರು .

ವರದಿ ಕೇಳಿದ ಕೇಂದ್ರ:

ಈ ಮಧ್ಯೆ  ಭದ್ರತಾ ಲೋಪವಾಗಿದ್ದು  ಘಟನೆಯ ಬಗ್ಗೆ ಪೂರ್ಣ ವರದಿಯನ್ನು ನೀಡುವಂತೆ   ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ  ನೋಟಿಸ್ ಜಾರಿ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಟ್ವೀಟ್ ಮೂಲಕ ಪಂಜಾಬ್ ಮುಖ್ಯಮಂತ್ರಿಯವರ ನಡವಳಿಕೆಯನ್ನು ಬಲವಾಗಿ ಖಂಡಿಸಿ, , ದೂರವಾಣಿ ಕರೆಯನ್ನು ಸ್ವೀಕರಿಸದೆ ಬಹಳ  ಅಹಂಕಾರ ಮೆರೆದಿದ್ದಾರೆ ಎಂದು ದೂರಿದ್ದಾರೆ.

ಪ್ರಧಾನಿ ಸಭೆಗೆ ಜನರು ಹೋಗದಂತೆ ತಡೆಯಬೇಕೆಂದು ಪೊಲೀಸರಿಗೆ ರಾಜ್ಯ ಸರ್ಕಾರವೇ ಸೂಚನೆ ಕೊಟ್ಟಿದೆ. ಈ ವೈಫಲ್ಯದ ಹೊಣೆಯನ್ನು ರಾಜ್ಯ ಸರ್ಕಾವೇ ಹೊರಬೇಕು ನಡ್ಡಾ ನೇರ ಆರೋಪಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button