Breaking NewsLatestಮೆಟ್ರೋರಾಜ್ಯಸುದ್ದಿ
Karnataka: ರಾಜ್ಯದಲ್ಲಿ ಇಂದು ಹೊಸದಾಗಿ 2479 ಕೊರೊನಾ ಪ್ರಕರಣಗಳು ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2479 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈ ಕುರಿತಂತೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇಂದು ಪತ್ತೆಯಾಗಿರುವ 2,479 ಸೋಂಕಿತರಲ್ಲಿ ಬೆಂಗಳೂರು ಒಂದರಲ್ಲೆ ಅತಿ ಹೆಚ್ಚು 2053 ಸೋಂಕಿತರು ಪತ್ತೆಯಾಗಿದ್ದಾರೆ.
ನಾಲ್ವರು ಕೊರೊನಾ ವೈರಸ್ಕ್ಕೆ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟಾರೆ ಕೊರೊನಾ ಪಾಸಿಟಿವಿಟಿ ದರ ಶೇಕಡಾ 2.59 ಆಗಿದೆ. ನಿನ್ನೆ 1 ಸಾವಿರದಷ್ಟಿದ್ದ ಕೊರೊನಾ ಕೇಸ್ ಇಂದು 2 ಸಾವಿರ ತಲುಪಿದೆ.
