Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಐಸಿಸ್ ಜೊತೆ ಸಂಪರ್ಕ ಆರೋಪ : ಮಾಜಿ ಶಾಸಕ ಬಿ ಎಂ ಇದಿನಬ್ಬ ಮೊಮ್ಮಗನ ಪತ್ನಿಯ ಬಂಧನ

ಮಂಗಳೂರು : ಉಳ್ಳಾಲದ ಮಾಜಿ ಶಾಸಕ ಬಿ. ಎಂ. ಇದಿನಬ್ಬ ಅವರ ಪುತ್ರ, ಬಿ. ಎಂ. ಬಾಷಾ ಮನೆಯಲ್ಲಿದ್ದ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂ ಳನ್ನು ಎನ್​​ಐಎ ಡಿವೈಎಸ್​​ಪಿ ಕೃಷ್ಣಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ. ಎಂ. ಬಾಷಾ ಅವರ ಮನೆಗೆ ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ, ಬಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಿ ಕರೆದೊಯ್ದಿದ್ದರು.

ಈ ವೇಳೆ ಐಸಿಸ್‌ ಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಆಪ್‌ ಗಳಲ್ಲಿ ಧನ ಸಂಚಯ, ಐಸಿಸ್‌ ಗೆ ಯುವಕರನ್ನು ಸೇರಿಸಲು ಪ್ರೇರೇಪಿಸುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿತ್ತು. ದಾಳಿಯ ವೇಳೆ ಲ್ಯಾಪ್‌ ಟಾಪ್‌ ಮೊಬೈಲ್‌ ಫೋನ್‌ ಹಾರ್ಡ್‌ ಡಿಸ್ಕ್. ಪೆನ್‌ಡ್ರೈವ್‌ ಹಾಗೂ ಹಲವು ಸಿಮ್‌ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಾಷಾ ಅವರ ಇನ್ನೊಬ್ಬ ಪುತ್ರ ಅನಾಸ್‌ ಅವರ ಪತ್ನಿ ಮರಿಯಂ ಅವಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು.

ಮರಿಯಂಗೆ ಸಣ್ಣ ಮಗು ಇದೆ ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸದೆ ಬಿಟ್ಟು ಕಳುಹಿಸಿದ್ದರು ಎನ್ನಲಾಗಿತ್ತು. ಆದರೆ ನಿರಂತರ ನಿಗಾದಿಂದ ಆಕೆಯ ಸಂಪರ್ಕದ ಜಾಡು ಹಿಡಿದು ದೆಹಲಿಯಿಂದ ಬಂದಿದ್ದ NIA ಅಧಿಕಾರಿಗಳು ಮರಿಯಂಳನ್ನು ವಿಚಾರಿಸಿ ವಶಕ್ಕೆ ಪಡೆದು ಟೆಂಪೋ ಟ್ರಾವೆಲರ್ ಮೂಲಕ ಕರೆದೊಯ್ದಿದ್ದಾರೆ. ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕೋರ್ಟಿಗೆ ಹಾಜರು ಪಡಿಸಲಾಯಿತು ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button