Latestಉತ್ತರ ಕನ್ನಡಜಿಲ್ಲಾ ಸುದ್ದಿ

ಕಾರವಾರ : ಕದ್ರಾ ಕೆಪಿಸಿ ಕಛೇರಿ ಎದುರು ಮಾಜಿ ಶಾಸಕ ಸತೀಶ್ ಸೈಲ್ ಧರಣಿ

ಕಾರವಾರ : ಕೆಪಿಸಿಯ ಕದ್ರಾ ಮತ್ತು ಕೊಡಸಳ್ಳಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಕದ್ರಾ ಕೆ.ಪಿ.ಸಿ ಕಛೇರಿ ಮುಂದೆ ಗುತ್ತಿಗೆ ಕಾರ್ಮಿಕರೊಡನೆ ಧರಣಿ ನಡೆಸಿದರು.

ಕೆಪಿಸಿ ಗುತ್ತಿಗೆದಾರರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗಧಿ ಪಡಿಸಿದ ಕನಿಷ್ಠ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಈ ಕುರಿತು ಸಮಸ್ಯೆ ಬಗೆಹರಿಸಲು ಹಲವಾರು ಬಾರಿ ಆಡಳಿತ ಮಂಡಳಿಯ ಗಮನ ಸೆಳೆದಿದ್ದೇನೆ.

ಆದರೂ ಗುತ್ತಿಗೆದಾರರು ಸ್ಪಂದಿಸದಿದ್ದ ಕಾರಣ ಇಂದು ಅನಿವಾರ್ಯವಾಗಿ ಧರಣಿ ನಡೆಸಬೇಕಾಯಿತು ಎಂದು ಸತೀಶ್ ಸೈಲ್ ತಿಳಿಸಿದರು.ನಂತರ ಆಡಳಿತವರ್ಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು,ಅಧಿಕಾರಿಗಳಿಂದ ಪ್ರತಿಭಟನಾಕಾರರು ಪತ್ರ ಬರೆಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು

Spread the love

Related Articles

Leave a Reply

Your email address will not be published. Required fields are marked *

Back to top button