
ನವದೆಹಲಿ: ದೇಶದಲ್ಲಿ ಕಳೆದ 2014ರ ನಂತರ ಗರಿಷ್ಠ 30864 ಮಹಿಳೆಯರ ವಿರುದ್ಧದ ಅಪರಾಧದ ಕುರಿತಾದ ದೂರುಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ 2021ರಲ್ಲಿ ಸ್ವೀಕರಿಸಿದ್ದು, ಇವುಗಳ ಪೈಕಿ ಅರ್ಧಕ್ಕೂ ಹೆಚ್ಚು ಉತ್ತರ ಪ್ರದೇಶದಿಂದ ಬಂದಿರುವುದು ವರದಿಯಾಗಿದೆ.
2020ರಲ್ಲಿ ದಾಖಲಾದ ದೂರುಗಳ ಸಂಖ್ಯೆ 23722 ಆಗಿತ್ತು. 2021ರಲ್ಲಿ ದಾಖಲಾದ ದೂರುಗಳ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. ಗರಿಷ್ಠ 11013 ದೂರುಗಳು ಮಹಿಳೆಯರ ಭಾವನಾತ್ಮಕ ನಿಂದನೆಗೆ ಸಂಬಂಧಿಸಿದ್ದಾಗಿದ್ದರೆ 6633 ಪ್ರಕರಣಗಳು ಕೌಟುಂಬಿಕ ಹಿಂಸೆ ಹಾಗೂ 4589 ವರದಕ್ಷಿಣೆ ಕಿರುಕುಳ ಪ್ರಕರಣಗಳಾಗಿವೆ
ಉತ್ತರ ಪ್ರದೇಶದಲ್ಲಿ ದಾಖಲಾದ 15828 ದೂರುಗಳು ದೇಶದಲ್ಲೇ ಗರಿಷ್ಠವಾಗಿದೆ. ನಂತರದ ಸ್ಥಾನಗಳಲ್ಲಿ ದೆಹಲಿ-3336, ಮಹಾರಾಷ್ಟ್ರ-1504, ಹರ್ಯಾಣ-1460, ಬಿಹಾರ-1456 ದೂರುಗಳು ದಾಖಲಾಗಿವೆ.



