Latestಚಿಕ್ಕಮಗಳೂರುಜಿಲ್ಲಾ ಸುದ್ದಿರಾಜ್ಯಸುದ್ದಿ

ಶಾಲಾ ಪಠ್ಯಗಳಲ್ಲಿ ʼಬಾಬಾಬುಡನ್ ಗಿರಿʼ ಹೆಸರು ಬದಲಿಸಲು ಶಿಕ್ಷಣ ಇಲಾಖೆಗೆ ಸೂಚನೆ

ಚಿಕ್ಕಮಗಳೂರು: ಶಾಲಾ ಪಠ್ಯ ಪುಸ್ತಕಗಳಲ್ಲಿ ನಮೂದಾಗಿರುವ ʼಬಾಬಾ ಬುಡನ್ ಗಿರಿʼ ಹೆಸರನ್ನು ಬದಲಾಯಿಸಿ ʼಇನಾಂ ದತ್ತಾತ್ರೇಯ ಪೀಠ ಎಂದು ಮುದ್ರಿಸಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ ಬಿ ಸಿ ನಾಗೇಶ್ ಸೂಚನೆ ನೀಡಿದ್ದಾರೆ.

ರಾಜ್ಯಪಠ್ಯಕ್ರಮದ 4, 6 ಮತ್ತು 9ನೇ ತರಗತಿ ಪಠ್ಯಪುಸ್ತಕಗಳಲ್ಲಿ ಬಾಬಾ ಬುಡನ್ ಗಿರಿ ಎಂದು ಹೆಸರಿದ್ದು, ಇದನ್ನು ಬದಲಾಯಿಸುವಂತೆ ಊಪಸಭಾಪತಿ ಎಂ ಕೆ ಪ್ರಾಣೇಶ್ ಅವರು ಪತ್ರ ಬರೆದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಮಂತ್ರಿ ಈ ನಿರ್ದೇಶನ ನೀಡಿದ್ದಾರೆ.

ಸರ್ಕಾರಿ ದಾಖಲೆಗಳಲ್ಲಿ ʼಇನಾಂ ದತ್ತಾತ್ರೇಯ ಪೀಠʼ ಎಂದು ನಮೂದಾಗಿರುವಂತೆ ಪಠ್ಯಪುಸ್ತಕಗಳಲ್ಲೂ ನಮೂದಿಸಬೇಕು ಎಂದು ಆಗ್ರಹಿಸಿ ಉಪಸಭಾಪತಿ ಎಂ ಕೆ ಪ್ರಾಣೇಶ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button