Latestರಾಜಕೀಯರಾಜ್ಯಸುದ್ದಿ

ಅಖಿಲೇಶ್ ಯಾದವ್ ಅಪ್ತನ ಮೇಲೆ ಐಟಿ ದಾಳಿ

ಲಖ್ನೋ: ಉತ್ತರಪ್ರದೇಶದಲ್ಲಿ(Uttar Pradesh) ವಿಧಾನಸಭೆ(Assembly Election) ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಐಟಿ ದಾಳಿ ಹೆಚ್ಚು ಸದ್ದು ಮಾಡುತ್ತಿದೆ. ಉತ್ತರಪ್ರದೇಶ ಸೇರಿದಂತೆ ದೇಶದ 20 ಕಡೆಗಳಲ್ಲಿ ಐಟಿ ಅಧಿಕಾರಿಗಳು(I.T.Raid) ದಾಳಿ ನಡೆಸಿದ್ದಾರೆ. ಕಾನ್ಪುರ ಕನೂಜ್ . ಸೂರತ್ ಮುಂಬೈ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಉತ್ತರಪ್ರದೇಶದಲ್ಲಿ(Samajvadi Party) ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್(Akhilesh yadav) ಅವರಿಗೆ ಆಪ್ತರಾಗಿರುವ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಪಂಪಿ ಜೈನ್(Pampi jain) ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಳೆದೆರಡು ದಿನಗಳಿಂದ ಹಿಂದೆ ಸುಗಂಧ ವ್ಯಾಪಾರಿ ಪಿಯೂಷ್ ಜೈನ್ (Piyush Jain)ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ಇಲಾಖೆ(I.T. officer) ಅಧಿಕಾರಿಗಳು ಸುಮಾರು 197 ಕೋಟಿ ರೂಪಾಯಿ ನಗದು ಹಾಗೂ ವ್ಯಾಪಕ ಪ್ರಮಾಣದ ಚಿನ್ನ ಬೆಳ್ಳಿ (Gold-Silver)ವಶಪಡಿಸಿಕೊಂಡಿದ್ದರು.ಸ್ವತಂತ್ರ ನಂತರ ಐಟಿ ದಾಳಿಯಲ್ಲಿ ಬಹಳ ದೊಡ್ಡಮಟ್ಟದ ನಗದನ್ನು(Cash) ವಶಪಡಿಸಿಕೊಂಡ ಪ್ರಕರಣಗಳಲ್ಲಿ ಇದು ಬಹಳ ಮಹತ್ವ ಪಡೆದುಕೊಂಡಿತ್ತು.
ನಂತರ ಸುಗಂಧ ವ್ಯಾಪಾರಿಯೊಂದಿಗೆ ನಂಟು ಹೊಂದಿರುವ ಇತರರ ಮೇಲೆ ಐಟಿ ಅಧಿಕಾರಿಗಳ ಕಣ್ಣು ಬಿದ್ದಿದ್ದು ಇಂದು ದೇಶದ 20 ಕಡೆ ದಾಳಿ ನಡೆಸಲಾಗಿದೆ. ತೆರಿಗೆ ವಂಚನೆ(Tax fraud) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ ನಡೆಸಲಾಗಿದೆ ಎಂದು ಐಟಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಐಟಿ ದಾಳಿ ಉತ್ತರಪ್ರದೇಶದಲ್ಲಿ ರಾಜಕೀಯ(Politics) ಜಿದ್ದಾಜಿದ್ದಿಗೆ ಕಾಣರವಾಗುತ್ತಿದೆ. ಪಿಯೂಷ್ ಜೈನ್ ಡೈರಿಯಲ್ಲಿ ಉಲ್ಲೇಖವಾಗಿರುವ ಹೆಸರುಗಳನ್ನು ನರೇಂದ್ರ ಮೋದಿ(Narendra Modi) ಸರ್ಕಾರ ಬಹಿರಂಗ ಪಡಿಸಲಿ ಇದರ ಹಿಂದಿನ ಅಸಲಿ ಸತ್ಯ ಬಹಿರಂಗವಾಗಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷ ರಾಜ್ಯದ ತುಂಬಾ ಭ್ರಷ್ಟಾಚಾರದ ಸುಗಂಧ ಹರಡುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಸಾರ್ವಜನಿಕ ಸಭೆಯಲ್ಲಿ ಲೇವಡಿ ಮಾಡಿದ್ದು, ಒಟ್ಟಾರೆ ಐಟಿ ದಾಳಿ ಚುನಾವಣೆಯ ಪ್ರಮುಖ ವಿಚಾರವಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button