Latestಜಿಲ್ಲಾ ಸುದ್ದಿದಾವಣಗೆರೆಮೆಟ್ರೋ
ದಾವಣಗೆರೆ ಮೂಲದ ಯುವತಿಗೆ ಒಮಿಕ್ರಾನ್: ಬೆಂಗಳೂರಿನಲ್ಲಿ ಚಿಕಿತ್ಸೆ

ದಾವಣಗೆರೆ: ದಾವಣಗೆರೆ ಮೂಲದ ಯುವತಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ರೆ ಈ ಯುವತಿ ದಾವಣಗೆರೆಗೆ ಬಂದಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 22 ವರ್ಷದ ಯುವತಿ ಡಿಸೆಂಬರ್ 22 ರಂದು ಯು. ಎಸ್. ಎ ಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಕೊರೊನಾ ಸೋಂಕು ಇರುವುದು ಖಚಿತಪಟ್ಟಿದೆ. ಬಳಿಕ ಜಿನಾಮಿಕ್ ಸಿಕ್ವೀನ್ಸಿಂಗ್ ಗೆ ಕಳಿಸಿದಾಗ ಡಿ. 28ರಂದು ಒಮಿಕ್ರಾನ್ ಪಾಸಿಟಿವ್ ಬಂದಿದೆ. ಯುವತಿಯು ಲಕ್ಷಣರಹಿತವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ದಾವಣಗೆರೆಗೆ ಬಂದಿಲ್ಲ. ಅವರ ಸಂಪರ್ಕದಲ್ಲಿದ್ದ ನಾಲ್ವರ ಮಾದರಿ ಪಡೆಯಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ



