Latestಜಿಲ್ಲಾ ಸುದ್ದಿರಾಜ್ಯಸುದ್ದಿ

ಹೊಸ ವರ್ಷದ ಮೊದಲ ದಿನವೇ ರೈತರ ಖಾತೆಗೆ ಹಣ

ನವದೆಹಲಿ:ರೈತ ಸಮುದಾಯಕ್ಕೆ ಹೊಸವರ್ಷದಲ್ಲಿ ಹೊಸ ಶುಭ ಸುದ್ದಿ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 10ನೇ ಕಂತಿನ ಹಣ ಜನವರಿ 1ರಂದೇ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.ಹೊಸವರ್ಷದ ಮೊದಲ ದಿನದಲ್ಲಿ ರೈತರ ಖಾತೆಗಳಿಗೆ ಪ್ರಧಾನಮಂತ್ರಿ ಅವರು ಹಣ ಬಿಡುಗಡೆ ಮಾಡಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶಾದ್ಯಂತ ರೈತರು ವರ್ಷಕ್ಕೆ 6ಸಾವಿರ ಸಾವಿರ ರೂಪಾಯಿಗಳನ್ನು ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಪಡೆಯುತ್ತಿದ್ದಾರೆ.
ಈಗಾಗಲೇ ಫಲಾನುಭವಿಗಳ ಮೊಬೈಲ್ ಗಳಿಗೆ ಸಂದೇಶ ರವಾನೆಯಾಗಿದ್ದು ಹೊಸವರ್ಷದ ಮೊದಲ ದಿನದಂದು ಹಣ ಬಿಡುಗಡೆಯಾಗಲಿದೆ.
ಕೇಂದ್ರದ ಜೊತೆಗೆ ಕರ್ನಾಟಕ ಸರ್ಕಾರವು 4ಸಾವಿರ ರೈತರ ಖಾತೆಗೆ ಜಮೆ ಮಾಡುತ್ತಿದೆ.
, ದೇಶಾದ್ಯಂತ ಕೋಟಿ ರೈತರು ವರ್ಷಕ್ಕೆ 6,000 ರೂ. ಪಡೆಯುತ್ತಾರೆ. ಕೇಂದ್ರ ಸರ್ಕಾರ ಈ ಹಣವನ್ನ ನೇರವಾಗಿ ರೈತರ ಖಾತೆಗೆ ವರ್ಗಾಯಿಸುತ್ತದೆ.ನೀವು ಸಹ ರೈತರಾಗಿದ್ದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಹೆಸರು ನೋಂದಾಯಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button