Latestರಾಜಕೀಯರಾಷ್ಟ್ರೀಯ

ಬಿಜೆಪಿ ಅಧಿಕಾರಕ್ಕೆ ತನ್ನಿ, ಅಗ್ಗದ ಬೆಲೆಗೆ ಮದ್ಯ ಸೇವಿಸಿ: ಆಂಧ್ರ ಬಿಜೆಪಿ ರಾಜ್ಯಾಧ್ಯಕ್ಷ ಆಮಿಷ!

ಹೈದರಾಬಾದ್, ಡಿ 29 ರಾಜ್ಯದಲ್ಲಿ ಬಿಜೆಪಿಅಧಿಕಾರಕ್ಕೆತಂದರೆ ಕೇವಲ 50 ರೂಪಾಯಿಗೆ ಗುಣಮಟ್ಟದ ಬಾಟಲ್ ಮದ್ಯ ಪೂರೈಸುವುದಾಗಿ ಆಂಧ್ರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸೋಮು ವೀರರಾಜು ಹೇಳಿದ್ದಾರೆ. ರಾಜ್ಯದಲ್ಲಿ ಆಗಾದ ನೈಸರ್ಗಿಕ ಸಂಪನ್ಮೂಲವಿದ್ದರು ಸಮಗ್ರವಾಗಿ ರಾಜ್ಯ ಅಭಿವೃದ್ಧಿಪಡಿಸುವಲ್ಲಿ ಮುಖ್ಯಮಂತ್ರಿ ಜಗನ್ ರೆಡ್ಡಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಒಂದು ಕೋಟಿ ಜನ ಮದ್ಯಸೇವನೆ ಮಾಡುತ್ತಿದ್ದು ಮುಂದಿನ 2024ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮದ್ಯ ಮಾರಾಟವನ್ನು ದುಬಾರಿ ಬೆಲೆಗೆ ಮಾರಾಟ ಮಾರಾಟ ಮಾಡಲಾಗುತ್ತಿದೆ .
ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದು ತಿಂಗಳಿಗೆ ಮದ್ಯ ಸೇವನೆಗಾಗಿ 12ಸಾವಿರ ರೂ. ವಿನಿಯೋಗ ಮಾಡುತ್ತಿದ್ದು, ಆ ದುಡ್ಡಿನ ಮೂಲಕವೇ ಮುಖ್ಯಮಂತ್ರಿ ಜಗನ್ ರೆಡ್ಡಿ ಜನ ಕಲ್ಯಾಣ ಯೋಜನೆಗಳ ನೆಪದಲ್ಲಿ ಜನರ ಹಣವನ್ನು ಮರಳಿ ವಾಪಸ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಅಮರಾವತಿಯನ್ನು ರಾಜ್ಯ ರಾಜಧಾನಿಯನ್ನಾಗಿ ಮಾಡಲು ಬಿಜೆಪಿ ಬದ್ಧವಾಗಿದೆ ಅಧಿಕಾರಕ್ಕೆ ಬಂದ ಮೂರು ವರ್ಷಗಳ ಅವಧಿಯಲ್ಲಿ ಇದನ್ನು ಮಾಡಿ ಮುಗಿಸಲಿದೆ ಮಾತಿನ ಮೂಲಕವೇ ಬಾಂಬ್ ಸಿಡಿಸುವ ಎಡಪಕ್ಷಗಳ ಧೋರಣೆ ದೇಶವನ್ನು ವಿನಾಶದಂಚಿಗೆ ನೂಕುತ್ತಿದೆ ಎಂದು ಬಿಜೆಪಿ ನಾಯಕ ತೀವ್ರ ವಾಗ್ದಾಳಿ ಮಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button