Breaking NewsLatestಆರೋಗ್ಯರಾಷ್ಟ್ರೀಯಸುದ್ದಿ

ಒಮಿಕ್ರಾನ್ ಸೋಂಕು: ಕರ್ನಾಟಕ ಸೇರಿ 10 ರಾಜ್ಯಗಳಿಗೆ ಶೀಘ್ರ ಕೇಂದ್ರದ ತಂಡ

ನವದೆಹಲಿ: ದೇಶದಲ್ಲಿ  ಹೆಚ್ಚುತ್ತಿರುವ ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳ  ನಿಯಂತ್ರಣಕ್ಕಾಗಿ  ಕರ್ನಾಟಕ್ಕೆ ಸೇರಿದಂತೆ  10 ರಾಜ್ಯಗಳಿಗೆ  ಕೇಂದ್ರ ಆರೋಗ್ಯ ಪರಿಣಿತರ ತಂಡವನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ.  ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕು  ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವೇ ಕೇಂದ್ರದ ಪರಿಣಿತರ ತಂಡ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಕರ್ನಾಟಕ ಕೇರಳ ಮಹಾರಾಷ್ಟ್ರ ಬಿಹಾರ ಪಶ್ಚಿಮ ಬಂಗಾಳ, ತಮಿಳುನಾಡು, ಮೊಜೋರಾಮ್ , ಬಿಹಾರ, ಜಾರ್ಖಂಡ್ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಿಗೆ ಕೇಂದ್ರದ ಆರೋಗ್ಯ ಪರಿಣಿತರ ತಂಡ ಭೇಟಿ ನೀಡಿ ಅಧ್ಯಯನ  ನಡೆಸಲಿದೆ.

ದೇಶದಲ್ಲಿ ಕೊವಿಡ್ ಸೋಂಕು   ಪ್ರಕಣಗಳು ಮತ್ತು ಸಾವಿನ  ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೇಂದ್ರ, 10 ರಾಜ್ಯಗಳಿಗೆ ಆರೋಗ್ಯ ಪರಿಣಿತರನ್ನು ಕಳುಹಿಸಿಕೊಕೊಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

10 ರಾಜ್ಯಗಳಲ್ಲಿ ಕೋವಿಡ್  ಲಸಿಕಾ ಕಾರ್ಯಕ್ರಮ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ನಿಗಾವಹಿಸಬೇಕಿದೆ. ಕೇಂದ್ರ ತಂಡ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ  ನೀಡಲಿದೆ.

ಕೇಂದ್ರದ ತಂಡ ರಾಜ್ಯಗಳಲ್ಲಿ ಮೂರರಿಂದ ಐದು ದಿನಗಳ ಕಾಲ ವಾಸ್ತವ್ಯ ಹೂಡಿ ಪರಿಶೀಲನೆ ನಡೆಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಂಕು  ಪತ್ತೆ  ಚಿಕಿತ್ಸೆ ಮತ್ತು ಕಣ್ಗಾವಲಿನ ಬಗ್ಗೆ ತಂಡ ವಿಶೇಷವಾಗಿ ರಾಜ್ಯದ ಅಧಿಕಾರಿಗಳ  ಜೊತೆ ಕೆಲಸ ಮಾಡಲಿದೆ .

Spread the love

Related Articles

Leave a Reply

Your email address will not be published. Required fields are marked *

Back to top button