Latestಮನರಂಜನೆಸಿನಿಮಾಸೆಲೆಬ್ರಿಟಿ

Rider Movie: ರೈಡರ್‌ ಆಗಿ ತೆರೆಗೆ ಬಂದ ನಿಖಿಲ್‌ ಕುಮಾರಸ್ವಾಮಿ

ಚಂದನವನದ ಯುವರಾಜ, ನಟ ನಿಖಿಲ್‌ ಕುಮಾರಸ್ವಾಮಿ ಅಭಿನಯದ ಬಹು ನೀರೀಕ್ಷೆಯ ಸಿನಿಮಾ ರೈಡರ್‌ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ಟೀಸರ್​ ಮತ್ತು ಹಾಡುಗಳು ಧೂಳೆಬ್ಬಿಸಿವೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಿಖಿಲ್​ ನಟಿಸಿದ್ದಾರೆ.

ಈ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ. ಚಂದ್ರು ಮನೋಹರನ್​, ಸುನಿಲ್​ ಗೌಡ ನಿರ್ಮಾಣ ಮಾಡಿದ್ದಾರೆ. ವಿಜಯ್​ಕುಮಾರ್​ ಕೊಂಡ ನಿರ್ದೇಶನ ಮಾಡಿದ್ದು, ಲಹರಿ ಸಂಸ್ಥೆ ಮೂಲಕ ಹಾಡುಗಳು ಹೊರಬಂದಿವೆ. ಸಿನಿಮಾದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಜೋಡಿಯಾಗಿ ಕಾಶ್ಮೀರಾ ಪರದೇಸಿ ಬಣ್ಣ ಹಚ್ಚಿದ್ದಾರೆ.

ಈ ಚಿತ್ರದಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟಗಾರನ ಪಾತ್ರ ಮಾಡುತ್ತಿದ್ದು, ನಾಯಕಿಯಾಗಿ ಕಾಶ್ಮೀರಿ ಪರದೇಸಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಲವ್ ಕೆಮಿಸ್ಟ್ರಿ ಬೊಂಬಾಟ್ ಆಗಿ ವರ್ಕ್‌ಔಟ್​ ಆಗಿದೆ. ಲವ್ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ನ್ನು ‘ರೈಡರ್’ ಪ್ರೇಕ್ಷಕರು ಕಾಣಬಹುದಾಗಿದೆ.

ಇನ್ನು ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ಅಚ್ಯುತ್‍ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಅನುಷಾ ರೈ, ಸಂಪದ ಹುಲಿವಾನ, ರಾಜೇಶ್ ನಟರಂಗ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲೂ ನಿಖಿಲ್‌ ಕುಮಾರಸ್ವಾಮಿ ಸಕ್ರಿಯರಾಗಿವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ರಾಜಕೀಯದಲ್ಲಿ ಅಷ್ಟೊಂದು ಸಕ್ಸಸ್‌ ಕಂಡಿಲ್ಲ. ಇನ್ನೂ ಸಿನಿಮಾದಲ್ಲಿ ಆದರೂ ಸಕ್ಸಸ್‌ ಕಾಣುತ್ತಾರಾ ಎಂಬುದು ಕಾದುನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button