ಉತ್ತರ ಕನ್ನಡಜಿಲ್ಲಾ ಸುದ್ದಿ

ಅಂಕೋಲಾದಲ್ಲಿ ಜೇನು ಕಡಿದು ಅಬಕಾರಿ ಮುಖ್ಯ ಪೇದೆ ಸಾವು

ಕಾರವಾರ : ಜೇನು ಕಡಿದು ಅಬಕಾರಿ ಮುಖ್ಯ ಪೇದೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಜ್ಜಿಕಟ್ಟಾದ ನೀಲಂಪುರದಲ್ಲಿ ನಡೆದಿದೆ.

ಹಸನ್ ಖಾನ್ ಕರೀಮ್ ಖಾನ್ ಜೇನು ಕಡಿದು ಮೃತರಾದ ಅಬಕಾರಿ ಸಿಬ್ಬಂದಿಯಾಗಿದ್ದಾರೆ. ನಿನ್ನೆ ದಿನ ಅಂಕೋಲಾದ ಅಜ್ಜಿಕಟ್ಟಾದ ನೀಲಂಪುರದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಜೇನು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಹಸನ್ ಖಾನ್ ಕರೀಮ್ ಖಾನ್ ಅವರನ್ನು ಕಾರವಾರದ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button