Breaking NewsLatestಬೆಳಗಾವಿರಾಜಕೀಯರಾಜ್ಯ

ಬೆಂಗಳೂರಿನಿಂದ 120 ವಾಹನಗಳಲ್ಲಿ ಬಂದಿದ್ದೇವೆ; ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ: ನಾರಾಯಣಗೌಡ

ಬೆಳಗಾವಿ: ಇತ್ತೀಚೆಗೆ ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಹಾಗೂ ಶಿವ ಸೇನಾ ಪುಂಡಾಟಿಕೆ ಮಿತಿಮೀರಿದೆ. ನಮ್ಮ ಸ್ವತಂತ್ರ ಹೋರಾಟಗಾರರ ಮೂರ್ತಿ ಭಗ್ನಗೊಳಿಸಿದ್ದಾರೆ. ರಾಜ್ಯದ ಧ್ವಜ ಸುಟ್ಟಿದ್ದಾರೆ ಹಾಗಾಗಿ ಈ ಎಲ್ಲ ಕೃತ್ಯಗಳನ್ನು ಖಂಡಿಸಿ, ರಾಜ್ಯದಲ್ಲಿ ಎರಡು ಸಂಘಟನೆಗಳ ನಿಷೇಧಿಸಲು ಒತ್ತಾಯಿಸಿ ಇಂದು ನಾವು ಸುವರ್ಣ ಸೌಧ ಮುತ್ತಿಗೆಗೆ ಹೊರಟ್ಟಿದ್ದೇವೆ. ಕಿತ್ತೂರಿನಿಂದ ಪಾದಯಾತ್ರೆಯ ಮೂಲಕ ಸುವರ್ಣ ಸೌಧಕ್ಕೆ ತೆರಳುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದರು.

ಈ ಕುರಿತು ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿಯಲ್ಲಿ ಈ ಎರಡು ಸಂಘಟನೆಗಳು ಶಾಂತಿ ಕದಡುವ ಕೆಕಸ ಮಾಡುತ್ತಲ್ಲೇ ಬರುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮತ್ತೆ ಅವರ ಉಪಟಳ ಹೆಚ್ಚಾಗಿದೆ, ಇದು ಸರಿಯಲ್ಲ. ಕನ್ನಡ ನಾಡಿನ ಆಸ್ತಿ ಹಾನಿ, ಸರ್ಕಾರಿ ವಾಹನಗಳಿಗೆ ಹಾನಿ ಮಾಡಿದ್ದಾರೆ. ಹಾಗಾಗಿ ಅವರ ಸಂಘಟನೆಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯ ಮಾಡಿದರು.

ಬೆಂಗಳೂರಿನಿಂದ 120 ವಾಹನಗಳಲ್ಲಿ ಬಂದಿದ್ದೇವೆ

1990ರಿಂದ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವ ಸೇನೆಯ ಪುಂಡಾಟಿಕೆ ನೋಡಿಕೊಂಡು ಬಂದಿಧೇವೆ. ಈ ಹಿಂದೆ ಎಂಇಎಸ್‌ನಿಂದ ಬೆಳಗಾವಿಯಲ್ಲಿ 7 ಜನ ಶಾಸಕರು ಆಯ್ಕೆಯಾಗುತ್ತಿದ್ದರು. ಆದರೆ ಇತ್ತೀಚೆಗೆ ‌ಆ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರಿಂದ ಹತಾಶರಾಗಿ ಎಂಇಎಸ್,ಶಿವ ಸೇನೆಯವರು ಈಗ‌ ಮತ್ತೆ ಪುಂಡಾಟಿಕೆ ಆರಂಭ ಮಾಡಿದ್ದಾರೆ.‌ ಇವರನ್ನು ಈಗ ಬೇರು ಸಮೇತವಾಗಿ ಕಿತ್ತು ಹಾಕಬೇಕಾಗಿದೆ. ಹಾಗಾಗಿ ಈಗ ನಾವು 120 ವಾಹನಗಳಲ್ಲಿ ಬೆಂಗಳೂರಿನಿಂದ ಬಂದಿದ್ದೇವೆ. ಉತ್ತರ ಕರ್ನಾಟಕ ಭಾಗದಿಂದಲೂ ನಮ್ಮ ಕಾರ್ಯಕರ್ತರು ಭಾಗವಹಿಸುತ್ತಾರೆ. ಪಾದಯಾತ್ರೆಯ ಮೂಲಕ ಸುವರ್ಣ ಸೌಧಕ್ಕೆ ತೆರಳಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಸಂಘಟನೆ ನಿಷೇಧಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಕರವೇ ಯಾವುದಕ್ಕೂ ಜಗುವುದಿಲ್ಲ

ಈಗಾಗಲೇ ನಮ್ಮ ಹೋರಾಟ ಆರಂಭವಾಗಿದೆ. ಕಿತ್ತೂರಿಗೆ ತೆರಳಿ ಅಲ್ಲಿಂದ ನಮ್ಮ ಪಾದಯಾತ್ರೆಯ ಆರಂಭುಸುತ್ತೇವೆ. ಯಾವುದಕ್ಕೂ ಅಂಜುವುದಿಲ್ಲ. ನಮ್ಮ ಕರವೇ ಹೋರಾಟ ಯಶಸ್ವಿಯಾಗಿಸುತ್ತೇವೆ. ಬೆಳಗಾವಿಯ ಸುವರ್ಣ ಸೌಧಕ್ಕೆ ಹೋಗಿ, ನಮ್ಮ ಮನವಿ ಸಲ್ಲಿಸಿಸುತ್ತೇವೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button