Breaking NewsLatestಬೆಳಗಾವಿರಾಜಕೀಯರಾಜ್ಯ

ಬೆಳಗಾವಿಯಲ್ಲಿ ಬಿಗಿ ಬಂದೋಬಸ್ತ್; ಪೊಲೀಸರಿಗೆ ಸಿಎಂ ಸೂಚನೆ

ಬೆಳಗಾವಿ: ಎಂಇಎಸ್ ಮತ್ತು ಶಿವಸೇನೆಯ ಪುಂಡರ ಪುಂಡಾಟಿಕೆಗೆ ಕನ್ನಡಿಗರನ್ನು ಸಿಡಿದೆದ್ದಾರೆ. ಕನ್ನಡಿಗರ ಕಿಚ್ಚಿಗೆ ಬೆಳಗಾವಿ ಸಾಕ್ಷಿಯಾಗಿದೆ.ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ನಗರದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೂಚಿಸಿದ್ದಾರೆ.

ನಿಷೇಧಾಜ್ಞೆ ಮುಂದುವರಿಕೆ
ಪರಿಸ್ಥಿತಿ ಬಹಳ ಸೂಕ್ಷ್ಮವಾಗಿರುವುದರಿಂಧ, ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದೂ ಸಿಎಂ ಬೊಮ್ಮಾಯಿ ಗೃಹ ಇಲಾಖೆಗೆ ಸೂಚಿನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದ್ಯಂತ 3 ಸಾವಿರದ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಡಿಸೆಂಬರ್ 22ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.

ಬೆಳಗಾವಿಯ ಚೆನ್ನಮ್ಮ ವೃತ್ತ, ಸುವರ್ಣಸೌಧ ಸುತ್ತಮುತ್ತ, ರಾಷ್ಟ್ರೀಯ ಹೆದ್ದಾರಿ, ಹಿರೇಬಾಗೇವಾಡಿ ಟೋಲ್ ಸೇರಿದಂತೆ ಬೆಳಗಾವಿ ನಗರದ ಪ್ರಮುಖ ವೃತ್ತ, ಸ್ಥಳಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button