ಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿಯಲ್ಲಿ ಕಳ್ಳನಿಗೆ ಸಾರ್ವಜನಿಕರ ಗೂಸಾ

ಹುಬ್ಬಳ್ಳಿ: ಅಟೋ ರಿಕ್ಷಾ ಚಾಲಕರ ಗಮನ ಬೇರೆಡೆ ಸೆಳೆದು ಅಟೋದಲ್ಲಿದ್ದ ಸಾಮಗ್ರಿಗಳ ಕಳ್ಳತನ ಮಾಡುತ್ತಿದ್ದ ಯುವಕನೋರ್ವನನ್ನು ಸ್ಥಳೀಯರು ರೆಡ್ ಹ್ಯಾಂಡಾಗಿ ಹಿಡಿದು, ಚಾಲಕಿ ಕಳ್ಳನಿಗೆ ಸರಿಯಾಗಿ ಗೂಸಾ ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ವಾಸನ್ ಐ ಕೇರ್ ಬಳಿಯಲ್ಲಿ ಅಟೋಚಾಲಕ ತನ್ನ ಬ್ಯಾಂಕಿನ ಕಾರ್ಯಕ್ಕೆ ನಿಲ್ಲಿಸಿ ಒಳಗೆ ನೀಜವಾದ ಅಟೋ ಚಾಲಕ ಒಳಗೆ ಹೋಗಿದ್ದಾನೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಚಾಲಾಕಿ ಕಳ್ಳ ಅಟೋ ಚಾಲಕ ಒಳಗೆ ಪ್ರವೇಶ ಮಾಡುತ್ತಿದಂತೆ, ರಿಕ್ಷಾದಲ್ಲಿದ್ದ ಸಾಮಗ್ರಿಗಳ ಕಳ್ಳತನಕ್ಕೆ ಮುಂದಾಗಿದ್ದಾನೆ. ಅವನ ಹಾವಭಾವ ನೋಡಿದ್ದ ಸ್ಥಳೀಯರು ವಿಚಾರಿಸಿದ್ದಾರೆ.

ಸ್ಥಳೀಯರ ವಿಚಾರಣೆ ಸಂದರ್ಭದಲ್ಲಿ ಇದು ನನ್ನದೇ ಅಟೋ ಎಂದು ಪೋಸ್ ಕೊಟ್ಟಿದ್ದಾನೆ. ಇಷ್ಟರಲ್ಲಿ ನೀಜವಾದ ಅಟೋ ಚಾಲಕ ಬಂದು, ನನ್ನ ಅಟೋ ಅನ್ನುತ್ತಿದ್ದ ಕಳ್ಳ ಖದೀಮನೆಗೆ ಗೂಸಾ ಕೊಟ್ಟಿದ್ದಾನೆ. ಇದನ್ನು ಅರಿತ ಸ್ಥಳೀಯರು ಕೂಡಲೇ ಪರಾರಿಯಾಗಲೂ ಯತ್ನಿಸುತ್ತಿದ್ದ, ಕಳ್ಳನನ್ನು ಹಿಡಿದು ಕಾಲು ಕಟ್ಟಿ ಸರಿಯಾಗಿ ಗೂಸಾ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿ ಚಾಲಾಕಿ ಕಳ್ಳನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.‌ ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ಕಳ್ಳನನ್ನು ವಿಚಾರಣೆ ನಡೆಸುತ್ತಿದ್ದಾರೆ.‌

Spread the love

Related Articles

Leave a Reply

Your email address will not be published. Required fields are marked *

Back to top button