ಕಲಬುರ್ಗಿಜಿಲ್ಲಾ ಸುದ್ದಿ

ಕಲಬುರ್ಗಿ ಬಳಿ ಲಾರಿ-ಬೈಕ್ ನಡುವೆ ಡಿಕ್ಕಿ : ಶಿಕ್ಷಕರಿಬ್ಬರ ಸಾವು

ಕಲಬುರಗಿ: ಲಾರಿ-ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಶಿಕ್ಷಕರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಆಳಂದ- ಕಲಬುರಗಿ ರಸ್ತೆಯ ಕಡಗಂಚಿ ಹತ್ತಿರ ನಡೆದಿದೆ.

ಆಳಂದ ತಾಲ್ಲೂಕಿನ ರುದ್ರವಾಡಿ ಎಚ್.ಕೆ.ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಸಿದ್ದರಾಮಪ್ಪ ರೇವಪ್ಪಗೋಳ (61) ಹಾಗೂ ಕನ್ನಡ ಶಿಕ್ಷಕ ನಾನಾಗೌಡ ಪಾಟೀಲ (55) ಮೃತ ದುರ್ದೈವಿಗಳು.

ದೈನಂದಿನಂತೆ ಶಾಲೆ ಮುಗಿಸಿ ಕಲಬುರಗಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ, ಕಡಗಂಚಿ ಸಮೀಪದ ಮೌಂಟ್ ಕಾರ್ಮೆಲ್ ಶಾಲೆ ಸಮೀಪದಲ್ಲಿ ಎದುರಿಗೆ ಬಂದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Leave a Reply

Your email address will not be published. Required fields are marked *

Back to top button