ಕಾಳುಮೆಣಸು ಕಳವು-ಆರೋಪಿಗೆ ನ್ಯಾಯಾಂಗ ಬಂಧನ

ಕೊಡಗು : ಜಿಲ್ಲೆಯ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಮನೆಯ ಕಾರ್ ಶೆಡ್ ನಲ್ಲಿರಿಸಿದ್ದ ಒಣಗಿದ ಕಾಳುಮೆಣಸನ್ನು ಕಳವು ಮಾಡಿದ ಆರೋಪಿಯನ್ನು ಶ್ರೀಮಂಗಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಹಿನ್ನಲೆ 15 ದಿನಗಳ ಕಾಲ ಆರೋಪಿಗೆ ನ್ಯಾಯಾಂಗ ಬಂಧನದ ಆದೇಶವನ್ನು ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶರು ವಿಧಿಸಿದ್ದಾರೆ.
ಟಿ. ಶೆಟ್ಟಿಗೇರಿ ಗ್ರಾಮದ ಬೆಳೆಗಾರ ಎಸ್.ಎಲ್.ಬ್ರಿಜೇಶ್ ಅವರು ಮಾರಾಟ ಮಾಡಿ,ಉಳಿದ 4 ಚೀಲ ಕಾಳುಮೆಣಸನ್ನು ಕಾರ್ ಶೆಡ್ ನಲ್ಲಿ ಇರಿಸಿದ್ದರು.120 ಕೆ.ಜಿ.ತೂಕದ ರೂ.37 ಸಾವಿರ ಮೌಲ್ಯದ ಕಾಳುಮೆಣಸು ರಾತ್ರಿ ಕಳವು ಆಗಿತ್ತು.
ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ತಾ.14 ರಂದು ದೂರು ನೀಡಿದ್ದು,ತನಿಖೆ ಕೈಗೊಂಡ ಪೊಲೀಸರು ಕುಟ್ಟ ನಾಲ್ಕೇರಿ ಗ್ರಾಮದ ಆರೋಪಿ ಎಂ.ಟಿ.ಪ್ರತಾಪ್ ಅಲಿಯಾಸ್ ಗಿರೀಶ್ ನನ್ನು ಬಂಧಿಸಿ, ಈತನ ಮನೆಯಲ್ಲಿ ಕಳವು ಮಾಡಿ ತಂದಿರಿಸಿದ್ದ 120 ಕೆ.ಜಿ.ಒಣಗಿದ ಕಾಳುಮೆಣಸು ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಜಯಕುಮಾರ್, ಉಪನಿರೀಕ್ಷಕ ಜಯರಾಮ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಉಪ ನಿರೀಕ್ಷಕ ಅರುಣ್, ಸಿಬ್ಬಂದಿಗಳಾದ ಖಾಲಿದ್, ಮಂಜು, ವಿಶ್ವನಾಥ್, ರಘು, ದೇವ್,ವೆಂಕಟೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು…




