ಚಿಕ್ಕಮಗಳೂರು

ಚುನಾವಣೆಯಲ್ಲಿ ಸೋತಿಲ್ಲ; ಮರು ಎಣಿಕೆಗೆ ಕೋರ್ಟ್ ಮೊರೆ ಹೋಗುತ್ತೇನೆ: ಗಾಯತ್ರಿ ಶಾಂತೇಗೌಡ

ಚಿಕ್ಕಮಗಳೂರು: ಚುನಾವಣೆಯಲ್ಲಿ ನಾನು ಸೋತಿಲ್ಲ. ಜಯಗಳಿಸಿದ್ದೇನೆ ಕಾರ್ಯಕರ್ತರು ಧೃತಿಗೆಡಬೇಡಿ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಲೋಪ ಉಂಟಾಗಿರುವುದು ಸೋಲಿಗೆ ಕಾರಣವಾಗಿದೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.

ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ಮರು ಎಣಿಕೆಯಾಗಬೇಕೆಂದು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕೋರ್ಟ್ ಮೊರೆ ಹೋಗುತ್ತೇನೆ. ನಾನು ಗೆದ್ದಿದ್ದೇನೆ, ಕಾರ್ಯಕರ್ತರ ಜೊತೆಯಲ್ಲಿ ಇರುತ್ತೇನೆ ಎಂದು ಕಣ್ಣೀರಿಟ್ಟರು.

Spread the love

Related Articles

Leave a Reply

Your email address will not be published. Required fields are marked *

Back to top button