ಲಗ್ನಪತ್ರಿಕೆಯಲ್ಲೂ ಪುನೀತ್ ರಾಜಕುಮಾರ್ ಭಾವಚಿತ್ರ; ಬಾಗಲಕೋಟೆಯಲ್ಲಿ ವಧು ವರರಿಂದ ಶ್ರದ್ಧಾಂಜಲಿ

ಬಾಗಲಕೋಟೆ: ಲಗ್ನಪತ್ರದಲ್ಲೂ ಅಪ್ಪು ಅಗಲಿಕೆಗೆ ನುಡಿ ನಮನ ಸಲ್ಲಿಸುವ ಮೂಲಕ ಬಾಗಲಕೋಟೆ ಜಿಲ್ಲೆಯಲ್ಲಿ ವಧುವರ ಗಮನಸೆಳೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ವರ ಶ್ರೀಧರ್,ಹಾಗೂ ವಧು ಸವಿತಾ ಲಗ್ನ ಪತ್ರಿಕೆಯಲ್ಲಿ ಅಪ್ಪುವಿಗೆ ನುಡಿ ನಮನ ಸಲ್ಲಿಸಿದ್ದಾರೆ.ಪುನೀತ್ ಫೋಟೊ ಜೊತೆಗೆ”ಜೊತೆಗಿರುವ ಜೀವ ಎಂದೆಂದಿಗೂ ಜೀವಂತ ಅಪ್ಪು ಅಮರ” ಎಂದು ಉಲ್ಲೇಖಿಸಿದ್ದು.ಡಿಸೆಂಬರ್ ೨೭ ರಂದು ಹೊಸೂರು ಗ್ರಾಮದ ಸಿದ್ದೇಶ್ವರ ದೇಗುಲದಲ್ಲಿ ಮದುವೆ ನಡೆಯಲಿದೆ.
ಈಗಾಗಲೇ ಬಂಧು ಬಳಗ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚುತ್ತಿದ್ದು, ಹೊಸೂರು ಗ್ರಾಮದ ನಿವಾಸಿ ಶ್ರೀಧರ್ ಹಾಗೂ ಬಾಗಲಕೋಟೆ ತಾಲ್ಲೂಕಿನ ಕಿರಸೂರು ಗ್ರಾಮದ ನಿವಾಸಿ ಸವಿತಾ ಜೋಡಿ ಹೊಸ ಬಾಳಿಗೆ ಕಾಲಿಡುತ್ತಿದ್ದು, ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಇನ್ನು ಎರಡು ಕುಟುಂಬಸ್ಥರು ಪುನೀತ್ ಅಭಿಮಾನಿಗಳಾಗಿದ್ದು.ಪುನೀತ್ ಅಗಲಿಕೆಯಿಂದ ದುಃಖ ಪಟ್ಟಿದ್ದರು.ಈಗ ಲಗ್ನ ಪತ್ರದಲ್ಲಿ ಪುನೀತ್ ಬಗ್ಗೆ ಉಲ್ಲೇಖಿಸಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.ಕೋವಿಡ್ ಬಗ್ಗೆ ಜೋಡಿಗಳಿಂದ ಲಗ್ನಪತ್ರದಲ್ಲಿ ಮಾಸ್ಕ್ ಧರಿಸಿಕೊಳ್ಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಅರಿವು ಮೂಡಿಸಿದ್ದಾರೆ.




