ಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರರಾಜಕೀಯ
ದೇವನಹಳ್ಳಿ ಗ್ರಾಮಾಂತರ ಕಾಂಗ್ರೆಸ್ನ ಎಸ್ ರವಿ 746 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಸ್ ರವಿ ಅವರು ಜೆಡಿಎಸ್ ನ ರಮೇಶ್ ಗೌಡ ಅವರನ್ನು 722 ಮತಗಳ ಅಂತರದಿಂದ ಸೋಲಿಸುವುದರೊಂದಿಗೆ ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರದ ಒಟ್ಟು 3912 ಮತಗಳಲ್ಲಿ 56 ಮತಗಳು ಅಸಿಂಧು ಆಗಿದ್ದು, 2301 ಮತಗಳನ್ನು ಪಡೆದು ಕಾಂಗ್ರೆಸ್ ನ ಎಸ್ ರವಿ ಅವರು ಮೂರನೇ ಬಾರಿಗೆ ಗೆಲುವಿನ ನಗೆ ಬೀರಿದರೆ ಜೆಡಿಎಸ್ ರಮೇಶ್ ಗೌಡ ಅವರು 1540 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಜೆಪಿಯ ಬಿಎಂ ನಾರಾಯಣ ಸ್ವಾಮಿ ಅವರು 54 ಮತಗಳನಷ್ಟೆ ಪಡೆದರು.
ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಮತದಾರರನ್ನು ಸೆಳೆಯಲು ಸಾಕಷ್ಟು ಮದ್ದುಗುಂಡು ಬಳಸಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದರು ಆದರೂ ನಮ್ಮ ಮುಖಂಡರು ಮತ್ತು ಕಾರ್ಯಕರ್ತರ ಪ್ರಾಮಾಣಿಕ ಕಾರ್ಯದಿಂದ ನಮಗೆ ಗೆಲುವು ಸಾಧ್ಯವಾಗಿದೆ ಎಂದು ಗೆಲುವಿನ ಬಗ್ಗೆ ಎಸ್ ರವಿ ಅವರು ಪ್ರತಿಕ್ರಿಯಿಸಿದ್ದಾರೆ.




