Latestಗದಗಜಿಲ್ಲಾ ಸುದ್ದಿರಾಜಕೀಯಹಾವೇರಿಹುಬ್ಬಳ್ಳಿ - ಧಾರವಾಡ
ಧಾರವಾಡ ದ್ವಿಸ್ಥಾನದ ಪರಿಷತ್ ಚುನಾವಣೆ : ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವು

ಧಾರವಾಡ : ಧಾರವಾಡ ಗದಗ ಹಾಗೂ ಹಾವೇರಿ ವ್ಯಾಪ್ತಿಯನ್ನು ಒಳಗೊಂಡ ದ್ವಿ ಸದಸ್ಯ ಸ್ಥಾನದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ನಂತರದ ಎರಡು ಹಾಗೂ ಮೂರು ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಿಂದಿಕ್ಕೆ ತಳುತ್ತಾ ಬಂದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರು ಈಗ ಮೊದಲ ಪ್ರಾಶಸ್ತ್ಯದಲ್ಲಿ ಗೆಲ್ಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಧಾರವಾಡ ಕೃಷಿ ವಿವಿ ಆವರಣದಲ್ಲಿ ಮತ ಏಣಿಕೆ ಮುಕ್ತಾಯವಾಗಿದೆ. ಎರಡನೇ ಸ್ಥಾನದದಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಗೆಲುವು ಕಂಡಿದ್ದಾರೆ.



