Latestಜಿಲ್ಲಾ ಸುದ್ದಿಬಾಗಲಕೋಟೆರಾಜಕೀಯವಿಜಯಪುರ

ವಿಜಯಪುರ-ಬಾಗಲಕೋಟೆ ಪರಿಷತ್ ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್​​ಗೆ ಗೆಲುವು

ಬಾಗಲಕೋಟೆ : ವಿಜಯಪುರ ಬಾಗಲಕೋಟೆ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳನ್ನು ಹೆಚ್ಚಿಗೆ ಪಡೆದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್ ಭರ್ಜರಿ ಗೆಲುವು ಸಾಧಿ‌ಸಿದ್ದಾರೆ.

ವಿಜಯಪುರ ದರ್ಬಾರ್ ಹೈಸ್ಕೂಲ್ ನಲ್ಲಿ ಮತ ಎಣಿಕೆ ನಡೆದಿದ್ದು, ಕಾಂಗ್ರೇಸ್ ನ ಸುನೀಲ್ ಗೌಡ ಪಾಟೀಲ್ 3311ಮತ ಪಡೆದರೆ,ಬಿಜೆಪಿಯ ಪಿಎಚ್ ಪೂಜಾರ್2329 ಮತಗಳನ್ನು ಪಡೆದುಕೊಂಡು 982ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.ಪಕ್ಷೇತರ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ 1290ಮತಗಳನ್ನು ಪಡೆದುಕೊಂಡಿದ್ದಾರೆ.

ಎರಡನೆ ಪ್ರಾಶಸ್ತ್ಯ ಮತಗಳ ಎಣಿಕೆ ನಡೆದಿದ್ದು, ಎರಡನೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಪಿಎಚ್ ಪೂಜಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆ ಇದೆ.

Spread the love

Related Articles

Leave a Reply

Your email address will not be published. Required fields are marked *

Back to top button