ಉತ್ತರ ಕನ್ನಡಜಿಲ್ಲಾ ಸುದ್ದಿ

ಯಲ್ಲಾಪುರ : ಬ್ಯಾಂಕ್ ಖಾತೆಯಿಂದ 87 ಸಾವಿರ ರೂಪಾಯಿ ದೋಖಾ

ಕಾರವಾರ : ಯಲ್ಲಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರ ಅಕೌಂಟ್ ಹ್ಯಾಕ್ ಮಾಡಿ 87 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದೆ.

ಮೂಲತಃ ಕಾರವಾರ ತಾಲೂಕಿನ ಕಡವಾಡ ಗ್ರಾಮದವರಾದ ಸದ್ಯ ಯಲ್ಲಾಪುರದಲ್ಲಿ ನೆಲೆಸಿರುವ ವಲಯ ಅರಣ್ಯಾಧಿಕಾರಿ ಎಮ್.ಜಿ.ನಾಯ್ಕ ಅವರು ಸೇಟ್ ಬ್ಯಾಂಕ್ ಆಫ್ ಇಂಡಿಯಾದ ಯಲ್ಲಾಪುರ ಶಾಖೆಯಲ್ಲಿ ಎಸ್.ಬಿ.ಐ ಅಕೌಂಟ್ ಹೊಂದಿದ್ದರು. ಅವರ ಅಕೌಂಟ್‌ನಲ್ಲಿ ಒಟ್ಟೂ ರೂಪಾಯಿ 87905.10 ಇತ್ತು,

ದುರುಳರು ಡಿಸೆಂಬರ್ 6 ರಂದು ಸೋಮವಾರ ಸಂಜೆ 5.00 ಗಂಟೆಯಿಂದ 6.00 ಘಂಟೆಯೊಳಗೆ 25 ಸಾವಿರ,20 ಸಾವಿರ,25 ಸಾವಿರ,5 ಸಾವಿರ,12 ಸಾವಿರ ಹೀಗೆ ಕ್ರಮವಾಗಿ ಐದು ಬಾರಿ ಹಣ ಡ್ರಾ ಮಾಡುವ ಮೂಲಕ 87 ಸಾವಿರ ರೂ. ಲಪಟಾಯಿಸಿದ್ದಾರೆ.

ನಂತರ ನಿವೃತ್ತ ಅಧಿಕಾರಿ ಎಮ್.ಜಿ.ನಾಯ್ಕ ಅವರ ಮೊಬೈಲ್‌ಗೆ ಹಣ ಡ್ರಾ ಮಾಡಿದ ಕುರಿತು ಮೆಸೇಜ್ ಬಂದಿದೆ.ಈ ಕುರಿತು ಎಸ್.ಬಿ.ಐ.ನ ಕಸ್ಪಮರ್ ಕೇರ್‌ ನಂಬರಿಗೆ ಫೋನ್ ಮಾಡಿ ತಮ್ಮ ಅಕೌಂಟ್‌ನಿಂದ 87 ಸಾವಿರ ರೂ.ತೆಗೆದ ಕುರಿತು ದೂರು ಸಲ್ಲಿಸಿದ್ದಾರೆ. ಮರುದಿನ ಯಲ್ಲಾಪುರದ ಎಸ್.ಬಿ.ಐ ಬ್ಯಾಂಕ್‌ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿ ಬ್ಯಾಂಕ್‌ನವರಿಗೆ ಮಾಹಿತಿ ನೀಡಿದ್ದಾರೆ. ನಂತರ ಕಾರವಾರದ ಕೈಮ್ ಬ್ರ್ಯಾಂಚ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button