ಜಿಲ್ಲಾ ಸುದ್ದಿಬಾಗಲಕೋಟೆರಾಜಕೀಯ

ಸಚಿವ ಗೋವಿಂದ ಆರ್​​ಎಸ್​​ಎಸ್​​ ಕೈಗೊಂಬೆ- ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಮಾಜಿ ಸಚಿವ ತಿಮ್ಮಾಪುರ

ಬಾಗಲಕೋಟೆ: ಆರ್​​ಎಸ್​​​ಎಸ್​​ ಕೈಗೊಂಬೆಯಾಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ದಲಿತರ ಬಗೆಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರ ಅಭಿವೃದ್ಧಿಗಾಗಿ ಸಚಿವ ಕಾರಜೋಳ ಏನು ಮಾಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ಸವಾಲು ಹಾಕಿದರು.

ಆರ್​​ಎಸ್​​ಎಸ್​​ ಅಣತಿಯಂತೆ ನಡೆಯುವ ಕಾರಜೋಳ ದಲಿತರ ಮರ್ಯಾದೆ ಹಾಳು ಮಾಡಿದ್ದಾರೆ. ಇಂತವರ ಮರ್ಯಾದೆಯನ್ನು ದಲಿತರು ಕಾಯಬೇಕಾ. ದಲಿತರ ಬಗೆಗೆ ಇವರು ಏನು ಮಾಡಿದ್ದಾರೆ ಎನ್ನುವ ಸಾಧನೆ ಮುಂದೆ ಇಡಲಿ ಎಂದರು.

ಮೇಲ್ಮನೆ ಪ್ರತಿಪಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ನನಗೆ ಏನಿದ್ದರೂ ಮುಧೋಳ ಶಾಸಕನಾಗಬೇಕು. ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನಿಡಬೇಕು ಎನ್ನುವ ಬಯಕೆ ನನ್ನದಾಗಿದೆ. ಟಿಕೆಟ್ ಗಾಗಿ ಪೈಪೋಟಿ ಸಾಮಾನ್ಯ ಇಕೆಟ್ ಸಿಕ್ಕವರ ಪರ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ. ಕಾಂಗ್ರೆಸ್‌ನ ಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಎಂದು ತಿಳಿಸಿದರು.

ಬಾದಾಮಿಯಲ್ಲಿ ನಿನ್ನೆ ನಡೆದ ಗೊಂದಲದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಸಚಿವ ಚಿಮ್ಮನಕಟ್ಟಿ ಅವರು ತಮ್ಮ ಮನಸ್ಸಿನ ಅಳಲು ತೋಡಿಕೊಂಡಿದ್ದಾರೆ. ಅದರ ಬಗ್ಗೆ ಪಕ್ಷವು ಚರ್ಚಿಸಲಿದೆ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button