ಕಲಬುರ್ಗಿ ಜಿಲ್ಲೆಗೆ ವಕ್ಕರಿಸಿತಾ ಒಮಿಕ್ರಾನ್ : ಓರ್ವ ವ್ಯಕ್ತಿಯ ಗಂಟಲು ದ್ರವ ಲ್ಯಾಬ್‌ಗೆ ರವಾನೆ

ಕಲಬುರ್ಗಿ: ಜಿಲ್ಲೆಯಲ್ಲಿ ಮೋದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಸೌದಿ ಅರೇಬಿಯಾದಿಂದ ಕಲಬುರಗಿಗೆ ಆಗಮಿಸಿದ್ದ 34 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೊಂಕಿನ ಲಕ್ಷಣ ಕಂಡು ಬಂದಿದೆ. ಈ ಹಿನ್ನಲೆ ವ್ಯಕ್ತಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಟಲು ದ್ರವ ಮಾದರಿಯನ್ನ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ತಾಜ್ ನಗರ ಬಡಾವಣೆಯ ನಿವಾಸಿಯಾಗಿರುವ ವ್ಯಕ್ತಿ ಕಳೆದ ನವೆಂಬರ್ 25 ರಂದು ಸೌದಿ ಅರೇಬಿಯಾದಿಂದ ಕಲಬುರಗಿಗೆ ಆಗಮಿಸಿದ್ದ ಎಂದು ತಿಳಿದುಬಂದಿದೆ. ಅನಾರೋಗ್ಯ್ಇಂದ ಬಳಲಿದ ಹಿನ್ನಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ವ್ಯಕ್ತಿಯನ್ನು ಪರಿಕ್ಷೆಗೆ ಒಳಪಡಿಸಿದಾಗ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನ ಡಿಸೆಂಬರ್ 4 ರಂದು ಬೆಂಗಳೂರು ಲ್ಯಾಬ್‌ಗೆ ರವಾನೆ ಮಾಡಲಾಗಿದ್ದು, ವರದಿಗಾಗಿ ಆರೋಗ್ಯ ಹಾಗೂ ಜಿಲ್ಲಾಡಳಿತ ಎದುರು ನೋಡುತ್ತಿದೆ.
ದೇಶದಲ್ಲಿ ಕೊರೊನಾಗೆ ಮೊದಲ ಬಲಿಯಾಗಿದ್ದ ಕಲಬುರಗಿಯಲ್ಲಿಗ ಒಮೀಕ್ರಾನ್ ಭೀತಿ ಶುರುವಾಗಿದೆ. ರೂಪಾಂತರಿ ಕೊರೊನಾ ಒಮೀಕ್ರಾನ್ ಕಲಬುರಗಿಗೆ ಕಾಲಿಟ್ಟಿದೆಯಾ..? ಎಂಬ ಆತಂಕ ಕಲಬುರಗಿ ಜನರಲ್ಲಿ ಮನೆ ಮಾಡಿದೆ.




