Latestಉತ್ತರ ಕನ್ನಡಜಿಲ್ಲಾ ಸುದ್ದಿರಾಜಕೀಯ

ಬಿಜೆಪಿ ಎಂದರೆ ಬ್ಯುಸಿನೆಸ್ ಜನತಾ ಪಾರ್ಟಿ: ಮಾಜಿ ಶಾಸಕ ಮಧು ಬಂಗಾರಪ್ಪ ಲೇವಡಿ

ಕಾರವಾರ : ನರೇಂದ್ರ ಮೋದಿ ಅವರು ಭೇಟಿ ಪಡಾವೋ ಭೇಟಿ ಬಚಾವೋ ಕಾರ್ಯಕ್ರಮದಲ್ಲಿ ನಮ್ಮ ಹಣದಲ್ಲಿ ನಮ್ಮ ಮಕ್ಕಳನ್ನು ಓದಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದು, ಇದೇ ರೀತಿ ಸ್ವಚ್ಚ ಭಾರತ ಅಭಿಯಾನ ಸಹ ಹೊರತಾಗಿಲ್ಲ. ಬಿಜೆಪಿ ಎಂದರೆ ಬ್ಯುಸಿನೆಸ್ ಜನತಾ ಪಾರ್ಟಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಲೇವಡಿ ಮಾಡಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣಾ ಅಂಗವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಒಂದು ವಸ್ತುವಿಗೆ 10 ರೂ.ಇದ್ದ ದರವನ್ನು ಬಿಜೆಪಿ ಸರಕಾರ 100 ರೂ.ಹೆಚ್ಚಿಗೆ ಮಾಡಿ ಕೊನೆಯಲ್ಲಿ 20 ರೂ.ಕಡಿಮೆ ಮಾಡಿ ಲೆಕ್ಕಾಚಾರ ತೋರಿಸುತ್ತಾರೆ. ಇವರು ಗುಜರಾತ್ ನಿಂದ ಬಂದ ವ್ಯಾಪಾರಿ ಬುದ್ದಿಯವರಾಗಿದ್ದು, ಆ ಹಿನ್ನೆಲೆಯಲ್ಲಿ ಬಿಜೆಪಿಯವರದ್ದು ಇದೇ ಮಾದರಿಯ ಕೆಲಸವಾಗಿದೆ ಎಂದರು. ದೇಶವನ್ನು ಸದೃಢ ಗೊಳಿಸಿ ಮುನ್ನಡೆಸುವ ಕೆಲಸದ ಬದಲು 70 ವರ್ಷದ ಕಾಂಗ್ರೆಸ್ ಸರಕಾರದ ಕೊಡುಗೆಯನ್ನು ಹರಾಜು ಮಾಡಿ ದೇಶವನ್ನು ದಿವಾಳಿ ಎಬ್ಬಿಸುವ ಕೆಲಸ ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ಖಾಸಗೀಕರಣದ ಜಪ ಮಾಡಿ ಎಲ್ಲಾ ಸರಕಾರದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ಎಲ್ಲಾ ಯೋಜನೆಗಳಲ್ಲಿ ಬಹುತೇಕ ಜನರ ಹಣವನ್ನೇ ಬಳಸಿಕೊಂಡು ಇವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಭೇಟಿ ಪಡಾವೋ ಭೇಟಿ ಬಚಾವೋ,ಸ್ವಚ್ಛ ಭಾರತ ಅಭಿಯಾನದಲ್ಲಿ ಕಸ‌ ಗುಡಿಸುವುದು ನಾವು, ಕಸಬರಿಗೆ ನಮ್ಮದು.ಆದರೆ ಬ್ಯಾನರ್ ನಲ್ಲಿ ಹೆಸರು ಪೋಟೋ ಬಿಜೆಪಿಯವರದ್ದಾಗಿದೆ. ಜನರಿಗೆ ಪ್ರಚಾರದ‌ ಗೀಳು ಹತ್ತಿಸಿ ತಪ್ಪು ದಾರಿ ಹಿಡಿಸುವುದು ಬಿಜೆಪಿಯ ಸಿದ್ದಾಂತವಾಗಿದೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಅವರನ್ನು ಬಿಜೆಪಿಯವರು ದೇವರಂತೆ ಪೂಜಿಸುತ್ತಿದ್ದರು.ಆದರೆ ಕೃಷಿ ಕಾಯ್ದೆ ರದ್ದತಿಯಿಂದ ಅವರು ರೈತರಲ್ಲಿ‌ ಕ್ಷಮೆ ಕೇಳುವಂತಾಗಿದೆ. ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡಿ ಮೃತಪಟ್ಟ 700 ರೈತರ ಸಾವಿಗೆ ಬಿಜೆಪಿಯವರು ಮರುಕ ಪಡುತ್ತಿಲ್ಲ. ಉಪ ಚುನಾವಣೆಯಲ್ಲಿ ಸೋತ ಮೇಲೆ ಕೃಷಿ ಕಾಯ್ದೆ ರದ್ದತಿ ಹಾಗೂ ಇಂಧನ ದರ ಇಳಿಕೆ ಮಾಡುವುದರ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಆಸೆಯಂತೆ ಭೀಮಣ್ಣ ನಾಯ್ಕ ಅವರನ್ನು ವಿಧಾನಸೌಧಕ್ಕೆ ಕಳುಹಿಸಬೇಕೆಂಬ ಆಸೆ ಇತ್ತು.ಅದನ್ನು ಈಗ ಸಾಕಾರಗೊಳಿಸಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಭೀಮಣ್ಣ ಅವರನ್ನು ಗೆಲ್ಲಿಸುವ ಮೂಲಕ ಬಂಗಾರಪ್ಪನವರ ಆಸೆ ಈಡೇರಿಸಬೇಕೆಂದರು.

ಭೀಮಣ್ಣ ನಾಯ್ಕ ಅವರು 13 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಉತ್ತಮವಾಗಿ ಮಾಡಿದ್ದಾರೆ. ಭೀಮಣ್ಣ ನಾಯ್ಕ ಅವರ ಗೆಲುವಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಈ ಭಾಗದ ಮುಖಂಡರ, ಕಾರ್ಯಕರ್ತರ ಬೆಂಬಲ,ಶ್ರಮ ಹೆಚ್ಚಿದೆ. ನಾನು ವಿರೋಧ ಪಕ್ಷದ ಶಾಸಕನಾಗಿದ್ದ ವೇಳೆ ನಮಗೆ ಪ್ರತಿ ವರ್ಷ 100 ಮನೆಗಳ ಹಂಚಿಕೆ ವಿತರಣೆ ಮಾಡಿದ್ದು, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಚಿರ ಋಣಿಯಾಗಿದ್ದೇನೆ. ಬಿಜೆಪಿ ಅವರಿಗೆ ಮತ ಕೇಳುವ ಹಕ್ಕು ಮತ್ತು ನೈತಿಕತೆ ಇಲ್ಲವೇ ಇಲ್ಲ ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಮಾಜಿ‌ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸಿಂಧೂ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಕಾಂಗ್ರೆಸ್ ಹಿರಿಯ ಮುಖಂಡ ಸೋಮಯ್ಯ ಗೊಂಡ, ಮುಂತಾದವರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button