ಎಂಎಲ್ಸಿ ಏನು ದೊಡ್ಡದ್ದಲ್ಲ ಎಸ್ ಆರ್ ಪಾಟೀಲ್ ಹಿರಿತನಕ್ಕೆ ದೊಡ್ಡ ಜವಾಬ್ದಾರಿ ಕೊಡುತ್ತಾರೆ: ಸುನೀಲ್ ಗೌಡ ಪಾಟೀಲ್

ಬಾಗಲಕೋಟೆ: ಇಬ್ಬರಿಗೂ ಟಿಕೆಟ್ ಕೊಡಿ ಎಂದಿದ್ದೀವಿ ಆದರೆ ಪಕ್ಷ ಒಬ್ಬರಿಗೆ ಟಿಕೆಟ್ ಕೊಟ್ಟಿದೆ. ಸುರ್ಜೇವಾಲ್, ಡಿಕೆಶಿ, ಸಿದ್ದರಾಮಯ್ಯ ಎಸ್ ಆರ್ ಪಾಟೀಲ್ ಜೊತೆಗೆ ಚರ್ಚಿಸಿದ್ದಾರೆ. ಎಂಎಲ್ಸಿ ಏನು ದೊಡ್ಡದಲ್ಲ. ಎಸ್ ಆರ್ ಪಾಟೀಲ್ ರಾಜಕೀಯ ಇತಿಹಾಸ, ಹಿರಿತನಕ್ಕೆ ದೊಡ್ಡ ಜವಾಬ್ದಾರಿ ಬರುವ ದಿನಗಳಲ್ಲಿ ಕೊಡುತ್ತಾರೆ ಎಂದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್ ಹೇಳಿದರು.
ಜಿಲ್ಲೆಯ ಬೀಳಗಿಯ ಎಸ್ ಆರ್ ಪಾಟೀಲ್ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಮಾತನಾಡಿದ ಅವರು, ಎಸ್ ಆರ್ ಪಾಟೀಲ್ ಗೆ ಅವಮಾನ ಮಾಡಲಾಗಿದೆ ಎಂದು ಈಶ್ವರಪ್ಪ,ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಚುನಾವಣೆ ಪೂರ್ವದಲ್ಲಿ ಪಕ್ಷದ ಸಭೆಯಲ್ಲಿ ವಿಜಯಪುರ ಬಾಗಲಕೋಟೆ ದ್ವಿಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಎಸ್ ಆರ್ ಪಾಟೀಲ್ ಹಾಗೂ ನನಗೆ ಇಬ್ಬರಿಗೂ ಟಿಕೆಟ್ ಕೊಡಿ ಎನ್ನುವ ಸ್ಟ್ಯಾಂಡ್ ಇತ್ತು. ಆದರೆ ನನಗೊಬ್ಬನಿಗೆ ಟಿಕೆಟ್ ಕೊಟ್ಟಿದ್ದಾರೆ. ಇದು ಪಕ್ಷದ ತೀರ್ಮಾನ, ಎಸ್ ಆರ್ ಪಾಟೀಲ್ ನಮ್ಮ ಹಿರಿಯರು ಅವರ ನೇತೃತ್ವದಲ್ಲಿ ಹೋಗ್ತೀವಿ ಎಂದರು.
ಕಳೆದ ವಿಜಯಪುರ ಬಾಗಲಕೋಟೆ ಸ್ಥಳಿಯ ಸಂಸ್ಥೆಗಳ ವಿಧಾನಪರಿಷತ್ ಉಪ ಚುನಾವಣೆ ವೇಳೆ ನನ್ನ ಪರ ಎಸ್ ಆರ್ ಪಾಟೀಲ್ ಪ್ರಚಾರ ಮಾಡಿದರು. ನನಗೆ ರಾಜಕೀಯ ಬರುವ ಉದ್ದೇಶ ಇರಲಿಲ್ಲ.ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆ ವೇಳೆ ಕಾಂಗ್ರೆಸ್ ಚುನಾವಣಾ ವೀಕ್ಷಕ ಡಿ ಆರ್ ಪಾಟೀಲ್ ನನಗೆ ಟಿಕೆಟ್ ಕೊಡಬೇಕೆಂದಿದ್ದರು. ಆದರೆ ನಾವು ಬೇರೊಬ್ಬರ ಹೆಸರನ್ನು ಸೂಚಿಸಿದ್ದೀವಿ. ಆದರೆ ಅಂತಿಮವಾಗಿ ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರು. ಎಸ್ ಆರ್ ಪಾಟೀಲ್ ರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೇಲ್ಲಾ ಊಹಾಪೋಹ ಎಬ್ಬಿಸುತ್ತಿದ್ದಾರೆ.ಇಬ್ಬರಿಗೆ ಟಿಕೆಟ್ ಕೊಡಿ ಎಂದು ಸ್ಟ್ಯಾಂಡ್ ಇತ್ತು.ಪಕ್ಷ ಒಬ್ಬರಿಗೆ ಟಿಕೆಟ್ ಕೊಟ್ಟಿದೆ ಎಂದು ತಿಳಿಸಿದರು.
ಕಳೆದ ಬಾರಿಯೂ ಮೂರು ಜನ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.ಮತ್ತೆ ಸ್ಪರ್ಧಿಸಿದ್ದಾರೆ.ಯಾಕೆ ಸ್ಪರ್ಧಿಸಿದ್ದಾರೆ ಎಂದು ಗೊತ್ತಿಲ್ಲ.ಗೆಲ್ಲಲು ಅವರು ಸ್ಪರ್ಧಿಸಿಲ್ಲ.ಕಳೆದ ಬಾರಿ ವೋಟ್ ಎಷ್ಟು ತೆಗೆದುಕೊಂಡಿದ್ದಾರೆ ಅನ್ನೋದು ತೆಗೆದು ನೋಡಿ.ಇನ್ನು ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಯಾಕೆ ಸ್ಪರ್ಧಿಸಿದ್ದಾರೆ ಎನ್ನೋದು ಡಿಸೆಂಬರ್ 10ರ ಬಳಿಕ ಬಹಿರಂಗಪಡಿಸುತ್ತೇನೆ ಎಂದು ಅಚ್ಚರಿ ಹೇಳಿಕೆ ನೀಡಿದ ಸುನೀಲ್ ಗೌಡ ಪಾಟೀಲ್ ಗುಟ್ಟು ಬಿಟ್ಟು ಕೊಡಲಿಲ್ಲ. ಇದೇ ವೇಳೆ ಟಿಕೆಟ್ ಕೈತಪ್ಪಿರುವ ಎಸ್ ಆರ್ ಪಾಟೀಲ್ ಭೇಟಿ ಮಾಡಿ ಸುನೀಲ್ ಗೌಡ ಪಾಟೀಲ್ ಚರ್ಚೆ ನಡೆಸಿದರು.




