Breaking Newsರಾಜಕೀಯರಾಜ್ಯಹುಬ್ಬಳ್ಳಿ - ಧಾರವಾಡ

ಬಿಜೆಪಿಯವರು ಶಿಸ್ತಿನ ಬಗ್ಗೆ ಮಾತಾಡುತ್ತಾರೆ, ಈಗ ಬೆಳಗಾವಿಯಲ್ಲಿ ಅದನ್ನು ತೋರಿಸಲಿ: ಡಿಕೆ ಶಿವಕುಮಾರ್

ಹುಬ್ಬಳ್ಳಿ: ಬಿಜೆಪಿಯವರು ಯಾವಾಗಲೂ ಶಿಸ್ತಿನ ಬಗ್ಗೆ ತುಂಬಾ ಮಾತನಾಡುತ್ತಾರೆ. ನಮ್ಮದು ಶಿಸ್ತಿನ ಪಕ್ಷ, ಬೇರೆ ಪಕ್ಷದ ಹಾಗೇ ನಾವು ಅಲ್ಲ ಎನ್ನಾತ್ತಾರೆ. ಬಿಜೆಪಿ ನಾಯಕರು ಈ ಹಿಂದಿನಿಂದಲೂ ಶಿಸ್ತಿನ ಕುರಿತು ಸಾಕಷ್ಟು ಹೇಳಿಕೆ ನೀಡಿದ್ದಾರೆ. ಈಗ‌ ಅದೇ ಶಿಸ್ತನ್ನು ಬಿಜೆಪಿಯರು ಬೆಳಗಾವಿಯಲ್ಲಿ ತೋರಿಸಲಿ ಎನ್ನುವ ಮೂಲಕ‌ ಪರಿಷತ್ ಚುನಾವಣೆಗೆ ಲಖನ್ ಜಾರಕಿಹೊಳಿಗೆ ಪರೋಕ್ಷವಾಗಿ ಬೆಂಬಲ‌ ನೀಡುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಮೇಲೆ ಕ್ರಮಕ್ಕೆ ಪರೋಕ್ಷವಾಗಿ ಒತ್ತಾಯ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯ ನಾಯಕರಾದ ಕೆ ಎಸ್ ಈಶ್ವರಪ್ಪನವರು ತಮ್ಮ ಪಕ್ಷ ಒಂದೇ ಶಿಸ್ತಿನ ಪಕ್ಷ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನಿಡುತ್ತಾ ಬಂದಿದ್ದರು. ಆದರೆ ಈ ಹಿಂದೆ ಅವರೇ ರಾಜ್ಯಪಾಲರಿಗೆ ಪತ್ರ ಬರೆದು, ತಮ್ಮಗಾದ ನೋವು ಹೇಳಿಕೊಂಡಿದ್ದರು. ಈಶ್ವರಪ್ಪನವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಈಗ ಬೆಳಗಾವಿಯಲ್ಲಿ ಅವರ ಪಕ್ಷದಲ್ಲಿ ಆಗಿರುವ ಬಗ್ಗೆ ಶಿಸ್ತು ಕ್ರಮದ ಕುರಿತು ಮಾತಾಡಲಿ ಎಂದು ಟಾಂಗ್ ನೀಡಿದರು. ‌

ಈ ಹಿಂದೆ ಎಸ್.ಎಂ. ಕೃಷ್ಣ ಅವರ ಸರಕಾರವಿದ್ದಾಗ ಇದೇ ಧಾರವಾಡದಲ್ಲಿ ಬೇಲೂರು ಘೋಷಣೆ ಅಂತ ಮಾಡಿದೆವು. ಆಗ 27 ಇಲಾಖೆಗಳನ್ನು ಈ ಯೋಜನೆಯಡಿ ತಂದೆವು. ಜೆ.ಎಚ್. ಪಟೇಲ್ ಅವರ ಸರಕಾರವಿದ್ದಾಗ ಬರೀ ಒಂದು ಲಕ್ಷ ರೂ ,ಅನುದಾನ ಸಿಗುತ್ತಿತ್ತು. ಅದನ್ನು ಕಾಂಗ್ರೆಸ್ ಸರಕಾರ ಹೆಚ್ಚು ಮಾಡಿತು. ಇವತ್ತು ಹೆಣ್ಮಕ್ಕಳಿಗೆ ಮೀಸಲಾತಿ ಇರಬಹುದು, ಅನುದಾನ ಇರಬಹುದು. ಇವೆಲ್ಲ ಕಾಂಗ್ರೆಸ್ ಸರಕಾರದ ಕೊಡುಗೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಇವುಗಳನ್ನು ಸ್ಮರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ. ಜತೆಗೆ ಈ ರಾಜ್ಯದಲ್ಲಿ ಬದಲಾವಣೆ ಆಗಬೇಕು ಎಂದು ಜನ ಬಯಸಿದ್ದಾರೆ. ಈಗಾಗಲೇ ನಿಮ್ಮ ಪಕ್ಕದ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ (ಹಾನಗಲ್) ಜನ ತೀರ್ಪು ಕೊಟ್ಟಿದ್ದಾರೆ. ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಎಲ್ಲ ಕಡೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಇನ್ನೂ ಬಿಜೆಪಿಯವರು 15 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದಾರಲ್ಲ, ಅವರು ಬರೀ 15 ಅಲ್ಲ 25 ಸ್ಥಾನಗಳನ್ನೂ ಅವರೇ ಗೆಲ್ಲಬಹುದು ಎಂದು ವ್ಯಂಗ್ಯ ಮಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ನರೇಗಾ ಯೋಜನೆಯಿಂದ ಪಂಚಾಯತಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಬಂದಿದೆ. ನರೇಗಾ ಅನುದಾನದಿಂದಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನರೇಗಾ ಇಲ್ಲದಿದ್ದರೆ ಪಂಚಾಯತಿಗಳಿಗೆ ಜೀವವೇ ಇಲ್ಲ. ಅವುಗಳಿಗೆ ಶಕ್ತಿ ಬಂದಿದೆ ಎಂದರೆ ಕಾಂಗ್ರೆಸ್ ಸರಕಾರದ ಇದ್ದಾಗ ಜಾರಿಗೆ ತಂದ ನರೇಗಾ ಯೋಜನೆಯಿಂದಲ್ಲೇ ಎಂದರು.

ಯಾವ ವಿಷಯವಾದರೂ ಸರಿ ಬಿಜೆಪಿ‌ ನಾಯಕ ಈಶ್ವರಪ್ಪರವರೊಂದಿಗೆ ಚರ್ಚೆಗೆ ಬರಲು ನಾನು ಸಿದ್ಧನಾಗಿದ್ದಾನೆ. ಅವರು ಸಮಯ ನಿಗದಿ ಮಾಡಿದರೆ ಚರ್ಚೆಗೆ ಬರಲು ನಾನು ಸದಾ ಸಿದ್ಧ. ಇನ್ನೂ ಬಿಟ್ ಕಾಯಿನ್ ವಿಚಾರ ಯಾವುದೆ ಕಾರಣಕ್ಕೂ ಬಿಡುವ ಮಾತಿಲ್ಲ. ಎಲ್ಲ ದಾಖಲೆಗಳು‌ ಇವೆ, ಚರ್ಚಿಸುತ್ತೇವೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button