ಈ ಬಾರಿ ಪರಿಷತ್ ಚುನಾವಣೆಯಲ್ಲಿ 5 ಸಾವಿರ ಮತಗಳಿಂದ ನಾನು ಗೆಲ್ಲುತ್ತೇನೆ: ಪ್ರದೀಪ್ ಶೆಟ್ಟರ್

ಧಾರವಾಡ: ಈಗಾಗಲೇ ನಾನು ಧಾರವಾಡ ಅವಿಭಜಿತ ವಿಧಾನ ಪರಿಷತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದೇನೆ. ಉತ್ತಮವಾದ ಬೆಂಬಲ ವ್ಯಕ್ತವಾಗಿತ್ತಿದೆ. ಇದು ನನ್ನ ಮೂರನೇ ಬಾರಿ ಸ್ಪರ್ಧೆಯಾಗಿದ್ದು, ನಮಗೆ ಸಿಗುವ ಅನುದಾನವನ್ನು ಈ ಹಿಂದೆ ಕ್ಷೇತ್ರಕ್ಕೆ ಸಮರ್ಪಕವಾಗಿ ತಂದಿದ್ದೇನೆ. ಹಾಗಾಗಿ ಈ ಬಾರಿ ನಮ್ಮ ಮತದಾರರು 5 ಸಾವಿರ ಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಎಂದರು.
ಈ ಕುರಿತು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಕಳೆದ ನನ್ನ ಅವಧಿಯಲ್ಲಿ ನಮ್ಮಗೆ ಸಿಗುವ ಅನುದಾನ ತರುವಲ್ಲಿ ಸಾಕಷ್ಟು ಶ್ರಮವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಧಾರವಾಡ ಅವಿಭಜಿತ ಕ್ಷೇತ್ರವಾಗಿರುವುದುರಿಂದ ಪರಿಷತ್ ಸದಸ್ಯರಿಗೆ ಸಿಗುವ ಅನುದಾನ ಸಾಲುತ್ತಿಲ್ಲ. ನಮ್ಮ ಕ್ಷೇತ್ರವು ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ನಮ್ಮಗೆ ನೀಡಲಾಗುವ ಅನುದಾನ ಏರಿಸಲು ಧ್ವನಿ ಎತ್ತಲಾಗುವುದು. ಯಾರೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು ಕೂಡಾ ನಮ್ಮ ಮತಗಳನ್ನು ಕಸಿಯಲು ಆಗುವುದಿಲ್ಲ. ಈ ಬಾರಿಯು ನಮ್ಮ ಗೆಲ್ಲವು ಖಚಿವೆಂದು ತಿಳಿಸಿದರು.
ಪ್ರತಿಯೊಂದು ಚುನಾವಣೆ ಮುಂಚೆ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಅಭ್ಯರ್ಥಿ ಯಾರು ಆಗಬಹುದು ಎಂಬ ಕೇಲವು ಗೊಂದಲಗಳು ಇರುತ್ತವೆ. ಟಿಕೆಟ್ ಘೋಷಣೆ ಮುಂಚೆ ಒಂದು ಸ್ಥಿತಿ ಇದ್ದರೆ, ಟಿಕೆಟ್ ಘೋಷಣೆಯ ನಂತರ ಮತ್ತೊಂದು ರೀತಿ ಪರಿಸ್ಥತಿ ಇರುತ್ತದೆ. ಆದರೆ ನಮ್ಮ ಪಕ್ಷದ ವರಿಷ್ಠರು ಹೆಚ್ಚು ಯಾವ ಗೊಂದಕ್ಕೂ ಅವಕಾಶ ನೀಡದೆ, ಈಗ ಮೂರನೆ ಬಾರಿಗೆ ನಮ್ಮಗೆ ಟಿಕೆಟ್ ನೀಡಿದ್ದಾರೆ. ಹಾಗೇ ನಮ್ಮ ಪಂಚಾಯತಿ, ಸಂಘ- ಸಂಸ್ಥೆಯ ಮತದಾರರು ಈಗ ಇತ್ತಮವಾಗಿ ಬೆಂಬಲ ನೀಡುತ್ತಿದ್ದಾರೆ. ಕಳೆದ ದಿನ ಹಾವೇರಿಯಲ್ಲಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬೆಂಬಲ ನೋಡಿ, ಈ ಬಾರಿಯು ಹೆಚ್ಚು ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂಬ ಭರವಸೆ ಹುಟ್ಟಿಸಿದೆ ಎಂದು ಹೇಳಿದರು.
ಹಾವೇರಿಯಲ್ಲಿ ಕೆಲವರು ಅನುದಾನದ ಬಗ್ಗೆ ಆಕ್ಷೇಪಣೆ ಮಾಡಿರುವುದು ನೀಜ:
ಹಾವೇರಿ ಜಿಲ್ಲೆಯ ಪರಿಷತ್ ಚುನಾವಣೆ ಪ್ರಚಾರಕ್ಕೆ ತೆರಳಿದಾಗ ಕೇಲವರು ನಮ್ಮ ಆತ್ಮೀಯರು ಆಕ್ಷೇಪಣೆ ಮಾಡಿದ್ದು ನೀಜ, ಬಳಿಕ ಅವರನ್ನು ನಾವು ಸ್ವತಃ ಭೇಟಿ ಮಾಡಿ ಅವರ ಮನವೊಲಿಸಿದ್ದೇವೆ. ಅವರು ಕೂಡಾ ಪರಿಷತ್ನಲ್ಲಿ ಸಿಗುವ ಅನುದಾನದ ಬಗ್ಗೆ ಹಾಗೂ ಕ್ಷೇತ್ರ ವ್ಯಾಪ್ತಿಯ ಕುರಿತು ತಿಳಿ ಹೇಳಿದ್ದೇವೆ. ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಕ್ಷೇತ್ರದ ವ್ಯಾಪ್ತಿಯ ದೊಡ್ಡದಾಗಿರುವುದರಿಂದ ಅನುದಾನದ ಕೊರತೆ ಕಾಡುವುದು ಸಹಜ, ಅದಕ್ಕೆ ಈ ಬಾರಿ ನಾವಿ ಗೆದ್ದು ಬಂದ ತಕ್ಷಣ ವರ್ಷಕ್ಕೆ ಇಪ್ಪತ್ತು ಕೋಟಿ ಅನುದಾನ ನೀಡಲು ಒತ್ತಾಯ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ನಮ್ಮ ಸ್ಪರ್ಧೆ ಬಗ್ಗೆ ಮೂರು ಜಿಲ್ಲೆಯಲ್ಲೂ ಯಾವ ವಿರೋಧವು ಇಲ್ಲ, ಎಲ್ಕ ನಮ್ಮಪಕ್ಷದ ನಾಯಕರು ಹಾಗೂ ಕ್ಷೇತ್ರದ ಮತದಾರರು ಕೂಡಾ ಒಪ್ಪಿಕೊಂಡಿದ್ದಾರೆ ಎಂದರು.




