ನಕಲಿ ಮದ್ಯ ಸರಬರಾಜು ಆರೋಪ: ಗ್ರಾಹಕರು, ಬಾರ್ ಸಿಬ್ಬಂದಿ ಮಧ್ಯೆ ಗಲಾಟೆ!

ಉಡುಪಿ: ಉಡುಪಿ ನಗರದ ಪ್ರಮುಖ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಎರಡು ದಿನಗಳ ಹಿಂದೆ ನಡೆದ ನಕಲಿ ಮದ್ಯ ಸರಬರಾಜು ವಿಚಾರವಾಗಿ ಗ್ರಾಹಕರು ಮತ್ತು ಬಾರ್ ಸಿಬ್ಬಂದಿ ನಡುವೆ ನಡೆದ ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರತಿಷ್ಠಿತ ಕುಟುಂಬವೊಂದು ಬಾರ್ ಅಂಡ್ ರೆಸ್ಟೋರೆಂಟ್ ಗೆ ಊಟ ಮಾಡಲು ಆಗಮಿಸಿತ್ತು. ಅಲ್ಲಿ ಊಟ ಮಾಡಿದ ಬಳಿಕ ಆ ಕುಟುಂಬಕ್ಕೆ ಕೊನೆಯಲ್ಲಿ ನಕಲಿ ಮದ್ಯ ಸರಬರಾಜು ಮಾಡುವುದು ಗಮನಕ್ಕೆ ಬಂದಿದೆ.ನಕಲಿ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಗ್ರಾಹಕರು ತಕರಾರು ತೆಗೆದಿದ್ದಾರೆ. ಆದರೆ ಬಾರ್ ಸಿಬ್ಬಂದಿ ಇದಕ್ಕೆ ಸೂಕ್ತ ಉತ್ತರ ನೀಡುವ ಬದಲು ಉಡಾಫೆಯಿಂದ ಉತ್ತರಿಸಿದ್ದಾರೆ. ಬಳಿಕ ಎರಡೂ ಕಡೆಯವರಿಂದ ಸಾಕಷ್ಟು ಮಾತಿನ ಚಕಮಕಿ ನಡೆದಿದೆ.
ಇದು ತುಂಬಾ ಜೋರಾದಾಗ ಪೊಲೀಸ್ ನವರಿಗೆ ಮಾಹಿತಿ ಹೋಗಿ ಪೋಲಿಸ್ ನವರು ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿದ್ದಾರೆ. ಸದ್ಯ ಅಬಕಾರಿ ಇಲಾಖೆ ಮಧ್ಯ ಪ್ರವೇಶಿಸಿದ್ದು ಮಧ್ಯದ ಸ್ಯಾಂಪಲನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳಿಸಲಾಗಿದೆ. ಈ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಕಲಿ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಈ ಹಿಂದೆಯೂ ದೂರು ಕೇಳಿ ಬಂದಿತ್ತು ಎನ್ನಲಾಗಿದೆ.




