ಚಿಕ್ಕಮಗಳೂರುಜಿಲ್ಲಾ ಸುದ್ದಿ
ಕರ್ತವ್ಯಲೋಪ: ಪಂಚಾಯಿತಿ ಅಧಿಕಾರಿಗಳು ಅಮಾನತು

ಚಿಕ್ಕಮಗಳೂರು: ಕರ್ತವ್ಯಲೋಪದ ಆರೋಪದಲ್ಲಿ ಇಬ್ಬರು ಪಿಡಿಒಗಳ ಸಹಿತ ಮೂವರನ್ನು ಅಮಾನತು ಮಾಡಲಾಗಿದೆ. ಕಾಮನ ಕೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿದ್ದ ಶೃತಿ ಈ ಹಿಂದೆ ಅಜ್ಜಂಪುರ ತಾಲೂಕು ಗೌರಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಖರೀದಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮತ್ತು ಲೆಕ್ಕಪತ್ರ ನೀಡುವಲ್ಲಿ ವಿಫಲರಾಗಿರುವ ಆರೋಪ ಹಾಗೂ ಕೆರೆಸಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ನಾಗರಾಜು ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.
ಎಸ್.ಬಿದರೆ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜುನಾಥ್ ಕಚೇರಿ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ, ಕಡತ ನೀಡುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದಲ್ಲಿ ಅಮಾನತು ಶಿಕ್ಷೆ ಪ್ರಕಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಪ್ರಭು ಆದೇಶ ಹೊರಡಿಸಿದ್ದಾರೆ.




