ಮಳೆಹಾನಿ ಪರಿಹಾರಕ್ಕೆ ಕೂಡಲೇ 130 ಕೋಟಿ ಬಿಡುಗಡೆ; ಸಿಎಂ ಸೂಚನೆ

ಬೆಂಗಳೂರು: ಮಳೆಹಾನಿ ಪರಿಹಾರ ನೀಡಲು ಕೂಡಲೇ 130 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಶುಕ್ರವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಪೆರೆನ್ಸ್ ಮೂಲಕ ನಡೆದ ಜಿಲ್ಲಾಡಳಿತಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಸಿಎಂ, ಹಾನಿಗೊಳಗಾದ ಮನೆಗಳಿಗೆ ತಕ್ಷಣ ಹತ್ತು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಪರಿಹಾರ ನೀಡಲು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳನ್ನೇ ಅನ್ವಯಮಾಡಬೇಕು ಎಂದ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಕ್ಷಣವೇ ಭೇಟಿ ನೀಡಬೇಕು. ಬೆಳೆ ಮತ್ತು ಇತರ ಹಾನಿಯ ಬಗ್ಗೆ ವಿಡಿಯೊ ಚಿತ್ರೀಕರಣ ಮಾಡಿಕೊಂಡು, ಕೇಂದ್ರ ತಂಡಕ್ಕೆ ನೀಡಬೇಕು. ತಂಡ ಬರುವುದು ಇನ್ನೂ ಒಂದು ತಿಂಗಳಾಗಬಹುದು ಎಂದು ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ ಸಲಹೆ ನೀಡಿದ್ದಾರೆ ಎಂದು ತಿಳಿದಿದೆ.
ತಿಂಗಳಾಂತ್ಯದವರೆಗೂ ಮಳೆ ಈಗ ರಾಜ್ಯದೆಲ್ಲೆಡೆ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಒಂದೆರಡು ದಿನ ಬಿಡುವು ಕೊಟ್ಟು ಮತ್ತೆ ನ.24 ರಿಂದ . ತಿಂಗಳಾಂತ್ಯದವರೆಗೂ ಬೀಳು ಮುನ್ಸೂಚನೆ ಇದೆ. ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಮುನ್ನೆಚರಿಕೆ ನೀಡಲಾಗಿದೆ.
