ಕೋಲಾರಜಿಲ್ಲಾ ಸುದ್ದಿ
ದತ್ತ ಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ನಾಳೆ ಕೋಲಾರ ಬಂದ್ ಗೆ ಕರೆ

ಕೋಲಾರ: ಚಿಕ್ಕಮಗಳೂರು ಜಿಲ್ಲೆಯ ದತ್ತ ಪೀಠಕ್ಕೆ ತೆರಳುತ್ತಿದ್ದ ದತ್ತ ಮಾಲಾಧಾರಿಗಳ ಬಸ್ ಮೇಲೆ ನ.13 ರಂದು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಹಿಂದುಪರ ಸಂಘಟನೆಗಳಿಂದ ನಾಳೆ ಕೋಲಾರ ಬಂದ್ ಗೆ ಕರೆ ನೀಡಲಾಗಿದೆ.
ನಾಳೆ ಬಂದ್ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಕೋಲಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ಬಂದ್ ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಕಾರ್ಯಕರ್ತರು ಮನವಿ ಮಾಡಿದರು.
ನಗರದ ಗಾಂಧಿವನದಿಂದ ಹೊರಟು ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಹಿಂದುಪರ ಸಂಘಟನೆ ಮುಖಂಡರು ಹಿಂದೂ ದತ್ತ ಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಕೋಲಾರ ಬಂದ್ ಗೆ ಕರೆ ನೀಡಿರುವ ಹಿಂದುಪರ ಸಂಘಟನೆಗಳ ಒಕ್ಕೂಟಗಳು ನವೆಂಬರ್ 18 ರಂದು ಗುರುವಾರ ಕೋಲಾರ ಬಂದ್ ಗೆ ಕರೆ ನೀಡಿದ್ದರು.




