Latestಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ಕಲಬುರಗಿ ಮಹಾನಗರ ಪಾಲಿಕೆ ಮೇಯರ್​​ ಆಯ್ಕೆ ದಿನಾಂಕ ಮುಂದೂಡಿಕೆ

ಕಲಬುರಗಿ: ಪಾಲಿಕೆ ಮೇಯರ್ ಗದ್ದುಗೆ ಚುನಾವಣೆ ಮತ್ತೆ ಮುಂದೂಡಲಾಗಿದೆ. ಇದರೊಂದಿಗೆ ಸಾರಥಿ ಇಲ್ಲದೆ ಪಾಲಿಕೆ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಹಿನ್ನಡೆಯಾಗುತ್ತಿದೆ.

ಕಳೆದ ಸೆ.03 ರಂದು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಚುನಾವಣೆ ಮುಗಿದು ಬರೋಬರಿ ಎರಡು ತಿಂಗಳಾದ್ರೂ ಇನ್ನೂ ಆಡಳಿತ ಯಂತ್ರ ಕಾರ್ಯವೈಕರಿ ಪ್ರಾರಂಭಗೊಳ್ಳುತ್ತಿಲ್ಲ. ಕೋವಿಡ್ ಹಾಗೂ ಇತರೆ ಕಾರಣದಿಂದಾಗಿ ಚುನಾವಣೆ ಮುಂದೂಡುತ್ತಲೇ ಬರಲಾಗುತ್ತಿದೆ. ಈ ನಡುವೆ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಕಡೆಗೂ ಇದೆ ತಿಂಗಳು 20 ರಂದು ನಿಗಧಿಯಾಗಿತ್ತು. ಆದ್ರಿಗ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನಲೆ ಮತ್ತೆ ದಿನಾಂಕ ಮುಂದುಡಲಾಗಿದೆ. ಇದರೊಂದಿಗೆ ಸಾರಥಿ ಆಯ್ಕೆ ಪ್ರಕ್ರಿಯೆಗೆ ಮತ್ತೆ ಹಿನ್ನಡೆಯಾಗಿದೆ.

ಇನ್ನು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23, ಜೆಡಿಎಸ್ 04 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ. ಓರ್ವ ಪಕ್ಷೇತರ ಅಭ್ಯರ್ಥಿ ಜಯಭೇರಿ ಬಾರಿಸಿದರು. ಪಕ್ಷೇತರ ಅಭ್ಯರ್ಥಿ ಬಿಜೆಪಿ ಸೇರಿದ್ದಾರೆ. 55 ಸದಸ್ಸರಿರುವ ಪಾಲಿಕೆ ಗದ್ದುಗೆ ಹಿಡಿಯಲು 32 ಮ್ಯಾಜಿಕ್ ಸಂಖ್ಯೆಯಾಗಿದೆ. ಪಾಲಿಕೆ‌ ಸದಸ್ಯರು, ಶಾಸಕರು, ಲೋಕಸಭಾ, ರಾಜ್ಯ ಸಭಾ ಸದಸ್ಯರು ಮೇಯರ್ ಆಯ್ಕೆಗೆ ಮತದಾರರಾಗಿದ್ದಾರೆ. ಆದ್ರೆ ಏಷ್ಟೆ ಕಸರತ್ತು ನಡೆಸಿದ್ರು ಸಲಿಸಾಗಿ ಗದ್ದುಗೆ ಹಿಡಿಯುವಷ್ಟು ಮತಗಳು ಯಾವ ಪಕ್ಷದ್ದು ಇಲ್ಲ, ಜೆಡಿಎಸ್ ನಾಲ್ಕು ಸದಸ್ಸರೆ ನಿರ್ಣಾಯಕರಾಗಿದ್ದಾರೆ. ಆದ್ರೆ ನಮಗೆ ಮೇಯರ್ ಪಟ್ಟ ಕೊಡುವ ಪಕ್ಷಕ್ಕೆ ನಮ್ಮ ಬೆಂಬಲ ಅಂತ ಜೆಡಿಎಸ್ ನಾಯಕರು ಘೋಷಿಸಿದ್ದು ಎರಡು ರಾಷ್ಟ್ರೀಯ ಪಕ್ಷಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಪರ್ಯಾಯ ಮಾರ್ಗ ಹುಡುಕುವಲ್ಲಿ ಎರಡು ಪಕ್ಷಗಳು ಕಸರತ್ತು ನಡೆಸಿವೆ.

ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತರ ಕಾರ್ಯತಂತ್ರ ರೂಪಿಸಲು ಎರಡು ಪಕ್ಷಗಳು ತೆರೆಮರೆಯಲ್ಲಿ ಕಸರತ್ತು ಚುರುಕುಗೊಳಿಸಿದ್ದರು.‌ ಇದೀಗ ಮತ್ತೆ ದಿನಾಂಕ ಮುಂದುಡಲಾಗಿದ್ದು ಮತ್ತಷ್ಟು ಸಮಯ ಸಿಕ್ಕಂತಾಗಿದೆ. ಆದ್ರೆ ಮೇಯರ್ ಇಲ್ಲದೆ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಕುಂಠಿತವಾಗುತ್ತಿದೆ ಅನ್ನೋದು ನಗರವಾಸಿಗಳ ಕಳವಳವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button