
ಉತ್ತರ ಪ್ರದೇಶ: ಭಾರತದ ಅತೀ ಉದ್ದದ ಎಕ್ಸ್ಪ್ರೆಸ್ ಮಾರ್ಗವಾದ ಉತ್ತರ ಪ್ರದೇಶದ ಪೂರ್ವಾಚಲಂ ಎಕ್ಸ್ಪ್ರೆಸ್ವೇ ಹೆದ್ದಾರಿಯನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಕರ್ವಾಲ್ ಖೇರಿಯಲ್ಲಿರುವ 341 ಕಿಲೋ ಮೀಟರ್ ಪೂರ್ವಾಂಚಲ ಎಕ್ಸ್ಪ್ರೆಸ್ವೇ ಹೆದ್ದಾರಿಯನ್ನ 42 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು. ಇಂದು ಉದ್ಘಾಟನೆ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ಈ ದಿನ ಉತ್ತರ ಪ್ರದೇಶದ ಅಭಿವೃದ್ಧಿಗೆ ವಿಶೇಕ್ಷ ದಿನವಾಗಿದ್ದು, ಉತ್ತರ ಪ್ರದೇಶದ ಸಾಮಾಜಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಸುಮಾರು 341 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇಯು ಲಕ್ನೋದಿಂದ ಬಿಹಾರದ ಬಕ್ಸಾರ್ ನಡುವಿನ ಪ್ರಯಾಣದ ಸಮಯವನ್ನು ಏಳು ಗಂಟೆಗಳಿಂದ ನಾಲ್ಕು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿ ವಿಮಾನವನ್ನು ಇಳಿಸಲು ಹೆದ್ದಾರಿಯ ಸಾಮರ್ಥ್ಯವನ್ನು ಪ್ರದರ್ಶಿಸುವ ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಧಾನಿ ಮೋದಿ ಇಳಿಯುವ ಮೂಲಕ ಉದ್ಘಾಟನೆ ಮಾಡಿದರು.



