
ಪಾಟ್ನಾ: ಟ್ರಕ್ ಹಾಗೂ ಎಸ್ ಯುವಿ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಮೃತಪಟ್ಟ ಘಟನೆ ಬಿಹಾರ ರಾಜ್ಯದ ಪಿಪ್ರಾ ಎಂಬ ಹಳ್ಳಿಯ ಸಮೀಪ ಸಿಕಂದ್ರಾ-ಶೇಖ್ಪುರ ಮುಖ್ಯ ರಸ್ತೆಯಲ್ಲಿ ದುರ್ಘಟನೆ ನಡೆದೆ.
ಜಮುಯಿಯ ಖೈರಾದಿಂದ ಪಾಟ್ನಾಕ್ಕೆ ತೆರಳಿದ್ದ 6 ಜನರು ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎಸ್ ಯುವಿ ವಾಹನದಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರು ಜಮುಯಿಯ ಖೈರಾ ಬ್ಲಾಕ್ನ ನೌದಿಹಾದವರು ಎಂದು ಗುರುತಿಸಲಾಗಿದ್ದು, ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



