Breaking NewsLatestರಾಜಕೀಯರಾಷ್ಟ್ರೀಯ

ರಾಜಕೀಯ ಲಾಭಕ್ಕಾಗಿ ಸಿಧು ಸುಳ್ಳು; ಪಂಜಾಬ್ ಅಡ್ವೋಕೇಟ್ ಜನರಲ್ ಡಿಯೋಲ್ ತಿರುಗೇಟು

ಚಂಡೀಘಡ: ತಮ್ಮ ರಾಜೀನಾಮೆಗೆ ಒತ್ತಾಯಿಸಿದ್ದ ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಅಡ್ವೋಕೇಟ್ ಜನರಲ್ ಎಪಿಎಸ್ ಡಿಯೋಲ್ ತಿರುಗೇಟು ಕೊಟ್ಟಿದ್ದಾರೆ.

ಪಂಜಾಬ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸಿಧು ವಾಪಸ್ ಪಡೆದ, ಆದರೆ ಡಿಜಿಪಿ ಮತ್ತು ಅಡ್ವೋಕೇಟ್ ಜನರಲ್ ಬದಲಾವಣೆ ಬಳಿಕವೇ ಅಧಿಕಾರ ವಹಿಸಿಕೊಳ್ಳುವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಸಿಧು ಬಗ್ಗೆ ಡಿಯೋಲ್ ಟೀಕೆ ಹೊರಬಿದ್ದಿದೆ.

ರಾಜಕೀಯ ಲಾಭ ಪಡೆಯಲು ಸಿಧು ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಟಿಯೋಲ್ ಆರೋಪಿಸಿದ್ದಾರೆ. ಪಂಜಾಬ್ ಸರ್ಕಾರ ಮತ್ತು ಟಡ್ವೋಕೇಟ್ ಜನರಲ್ ಕಾರ್ಯಕ್ಕೆ ಸಿಧು ಅಡ್ಡಿಪಡಿಸುತ್ತಿದ್ದಾರೆ ಎಂದೂ ಡಿಯೋಲ್ ಆಕ್ಷೇಪಿಸಿದ್ದಾರೆ.

ಪಂಜಾಬ್‌ನ ಅಡ್ವೊಕೇಟ್ ಜನರಲ್ ಅವರ ಸಾಂವಿಧಾನಿಕ ಕಚೇರಿಯನ್ನು ರಾಜಕೀಯಗೊಳಿಸುವ ಮೂಲಕ ಪಂಜಾಬ್‌ನಲ್ಲಿ ಮುಂಬರುವ ಚುನಾವಣೆಗಳನ್ನು ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ಲಾಭಕ್ಕಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಯನ್ನು ಕೆಡಿಸಲು ಪಟ್ಟಭದ್ರ ಹಿತಾಸಕ್ತಿಗಳ ಸಂಘಟಿತ ಪ್ರಯತ್ನ ನಡೆಯುತ್ತಿದೆ ಎಂದು ಡಿಯೋಲ್ ಹೇಳಿದ್ದಾರೆ.

ಡ್ರಗ್ಸ್ ವಿಷಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯ ಕೊಡಿಸುವಲ್ಲಿನ ರಾಜ್ಯದ ಪ್ರಾಮಾಣಿಕ ಪ್ರಯತ್ನಗಳನ್ನು ಹಳಿತಪ್ಪಿಸಲು ಸಿಧು ಇಂಥ ಪುನರಾವರ್ತಿತ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಅವರು ಡಿಯೋಲ್ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button