ತಂದೆಯ ಹಾದಿಯಲ್ಲಿ ಪುನೀತ್ ಸಾಗಿ ಬಂದಿದ್ದರು: ನಿಧನಕ್ಕೆ ಬಸವಾನಂದ ಶ್ರೀ ಸಂತಾಪ

ಹುಬ್ಬಳ್ಳಿ: ನಟ ಪುನೀತ್ ರಾಜಕುಮಾರವರ ನಿಧನ ಸುದ್ದಿ ಇಡೀ ರಾಜ್ಯಕ್ಕೆ ದಿಗ್ಭ್ರಮೆ ಆಗುಂತೆ ಮಾಡಿದೆ. ನನಗೆ ಕಣ್ಣು ಕಾಣಿಸುವುದಿಲ್ಲ, ಅವರನ್ನು ಕಣ್ಣಿಂದ ನೋಡಲು ಆಗಿರಲಿಲ್ಲ. ಅವರ ಹಾಡಿದ ಹಲವು ಹಾಡುಗಳನ್ನು ನಾನು ಕೇಳಿದ್ದೇನೆ. ದಿವಂಗತ ಡಾ. ರಾಜಕುಮಾರವರ ಹಾದಿಯಲ್ಲಿಯೇ ಪುನೀತ್ ಕೂಡಾ ಸಾಗಿ ಬಂದಿದ್ದರು. ಪ್ರತಿದಿನ ಪುನೀತ್ ರಾಜಕುಮಾರವರ ಒಂದಲ್ಲ ಒಂದು ಹಾಡನ್ನು ನಾನು ಕೇಳುತ್ತಲ್ಲೇ ಇರುತ್ತಿದ್ದೆ. ಆದರೆ ಅಂತಹ ಒಬ್ಬ ಉತ್ತಮ ನಟ ನಮ್ಮ ನಡುವೆ ಇಲ್ಲ ಅನ್ನುವುದೇ ನಂಬಲು ಆಗುತ್ತಿಲ್ಲ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ನಟ ಪುನೀತ್ ಅಕಾಲಿಕ ನಿಧನಕ್ಕೆ ಮನಗುಂಡಿ ಮಾಹಾಮನೆಯ ಶ್ರೀ ಬಸವಾನಂದ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ನಟ ಪುನೀತ ರಾಜಕುಮಾರವರ ನಿಧನದ ಕುರಿತು ಮಾತನಾಡಿದ ಶ್ರೀಗಳು, ಪುನೀತ್ ನಲವತ್ತಾರನೇ ವಯಸ್ಸಿನಲ್ಲೇ ನಿಧನರಾಗಿರುವುದು ತುಂಬಾ ನೋವುಂಟು ಮಾಡುತ್ತಿದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ. ನಿನ್ನೆ ಹಾಗೂ ಮೊನ್ನೆಯಷ್ಟೇ ಪುನೀತ ಅವರ ಕಂಠಸಿರಿಯಲ್ಲಿ ಮೂಡಿ ಬಂದ ರಾಜಕುಮಾರ ಚಿತ್ರದ ಹಾಡೊಂದನ್ನು ಕೇಳಿದೆ. ಆದರೆ ಈಗ ಅವರು ನಮ್ಮ ಜೊತೆಗೆ ಇಲ್ಲ, ನಮ್ಮ ಚಿತ್ರ ರಂಗಕ್ಕೆ ತುಂಬಾರದ ನಷ್ಟವಾಗಿದೆ. ಅವರ ಕುಟುಂಬಸ್ಥರಿಗೆ ಹಾಗೂ ಅವರ ಅಭಿಮಾನಿ ವೃಧಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಕೇಳಿಕೊಂಡರು.
ದಿವಂಗತ ಡಾ.ರಾಜಕುಮಾರವರ ಕಂಠಸಿರಿಯನ್ನು ಪುನೀತ್ ರಾಜಕುಮಾರ ಹೊಂದಿದ್ದರು. ಪುನೀತ ಅವರ ಹಾಡು ಕೇಳುತ್ತಿರುವಾಗ ಅವರ ತಂದೆಯ ಧ್ವನಿಯೇ ನಮ್ಮಗೆ ನೆನಪಿಗೆ ಬರುತಿತ್ತು. ಅವರ ಆಯಸ್ಸು ಈಗ ಮುಗಿದಿದೆ. ಅದನ್ನು ನಾವೆಲ್ಲರೂ ಒಪ್ಪಿಕೊಳ್ಳುವ ಸಮಯ ಬಂದಿದೆ, ನಾವೆಲ್ಲರೂ ಈಗ ಒಪ್ಪಿಕೊಂಡು ಪುನೀತ್ ಗೌರವ ಪೂರ್ವಕವಾಗಿ ಕಳುಹಿಸಿಕೋಡೋಣ. ಯಾರು ಕೂಡಾ ಅವರ ಆ ಸ್ನೇಹ ಮನೋಭಾವವನ್ನು ತುಂಬಿಕೊಡಲು ಸಾಧ್ಯವಿಲ್ಲ. ಅವರು ಈ ನಾಡಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದರು.




