ಕೊಡಗುಜಿಲ್ಲಾ ಸುದ್ದಿ
ಕರ್ನಾಟಕ ರಾಜ್ಯ ರೈತ ಸಂಘದಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ : ಚೆಸ್ಕಾಂ ವಿರುದ್ದ ಆಕ್ರೊಶ

ಕೊಡಗು : ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯನವರ ಮುಂದಾಳತ್ವದಲ್ಲಿ ಚೆಸ್ಕಾಂ ಇಲಾಖೆಯ ವಿರುದ್ದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕೊಡಗಿನ ಎಲ್ಲಾ ಭಾಗಗಳಿಂದಲೂ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಗೆ ರೈತಬಾಂಧವರು ಬೆಂಬಲಿಸಿದರು.
ಚೆಸ್ಕಾಂ ನಿಂದ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಇಲ್ಲ. ಕಾಪಿ ಕೆಲಸಗಳಿಗೂ ವಿದ್ಯುತ್ ನೀಡದ ಚೆಸ್ಕಾಂ ವಿರುದ್ದ ಆಕ್ರೋಶ ವ್ಯಕ್ತವಾಯಿತು.
ಕಾಫಿ ಕೆಲಸಗಳಿಗೆ ಉಚಿತ ವಿದ್ಯುತ್ ನೀಡುವುದು, ತಾಲ್ಲೂಕು ಕೇಂದ್ರದ ಸಬ್ ಸ್ಟೇಷನ್ ಉನ್ನತೀಕರಿಸಿ, ಮುಂತಾದ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳಲಾಗಿತ್ತು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯನವರ ಮುಂದಾಳತ್ವದಲ್ಲಿ ಚೆಸ್ಕಾಂ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಯಿತು. ನಂತರ ಸೆಸ್ಕ್ ಕಛೇರಿಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಲಾಯಿತು.




