
ಧಾರವಾಡ: ಕಾಂಗ್ರೆಸ್ ಅವಧಿಯಲ್ಲಿ ಸಿಲಿಕಾನ್ ಸಿಟಿ ಹಾಗೂ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಬಿಜೆಪಿ ಆಡಳಿತದಲ್ಲಿ ‘ಡ್ರಗ್ಸ್ ಸಿಟಿ’ ಆಗುತ್ತಿದೆ. ಬಿಜೆಪಿಗೂ ಡ್ರಗ್ಸ್ ಪೆಡ್ಲರ್ಗಳಿಗೂ ಇರುವ ನಂಟೇ ಈ ಹಂತಕ್ಕೆ ಬರಲು ಕಾರಣ. ಅದಾನಿ ಪೋರ್ಟ್ನ ಡ್ರಗ್ಸ್ ಬಗ್ಗೆ ಬಿಜೆಪಿಗರು ಮಾತನಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಕಾಂಗ್ರೆಸ್ ಬಿಜೆಪಿಯನ್ನು ಕಿಚಾಯಿಸಿದೆ.
ಇನ್ನೊಂದು ಟ್ವಿಟ್ ನಲ್ಲಿ ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ, ದಾಸ್ಯವನ್ನು ಧಿಕ್ಕರಿಸಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರೆ, ಮನುವಾದಿ ಸಿದ್ಧಾಂತದ ಸಂಘಪರಿವಾರ, ಬಿಜೆಪಿಯ ಮೂಲಕ ಗುಲಾಮಗಿರಿಯ ಪುನರಾವರ್ತನೆಯ ಪ್ರಯತ್ನದಲ್ಲಿದೆ. ಆದರೆ ಸ್ತ್ರೀ ಶಕ್ತಿ ಜಾಗೃತಗೊಂಡಿದ್ದು, ಬಿಜೆಪಿಯ ಸರ್ವಾಧಿಕಾರಿ ಪ್ರಭುತ್ವದ ಗುಲಾಮಿ ಕಟ್ಟಳೆಗಳನ್ನು ಮೀರಿ ಮುನ್ನಡೆಯಲಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.



