Latestಜಿಲ್ಲಾ ಸುದ್ದಿಮೈಸೂರು
School Reopened: ಎರಡು ವರ್ಷದ ಬಳಿಕ ಶಾಲೆಗಳತ್ತ ಮುಖ ಮಾಡಿದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು

ಮೈಸೂರು : ಇಂದಿನಿಂದ 1 ರಿಂದ 5 ನೇ ತರಗತಿ ಶಾಲೆ ಆರಂಭ ಹಿನ್ನೆಲೆ ಮೈಸೂರಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಿದ್ದು, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ.
ಕೆಲ ಶಾಲೆಗಳಲ್ಲಿ ತಳಿರು ತೋರಣ ಕಟ್ಟಿ ಮಕ್ಕಳನ್ನ ಬರಮಾಡಿಕೊಂಡರು. ಈಗಾಗಲೇ ಶಾಲೆ ಆವರಣ ಸ್ವಚ್ಚತೆ ಮಾಡಿ ಶಾಲೆ ಮುಂದೆ ರಂಗೋಲಿ ಬರೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 1-5 ನೇ ತರಗತಿವರೆಗೆ 1,98,296 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ 2,586 ಶಾಲೆಗಳು. 12 ಸಾವಿರಕ್ಕು ಹೆಚ್ಚು ಶಿಕ್ಷಕರು ಎರಡನೇ ಡೋಸ್ ಪಡೆದಿದ್ದಾರೆ.ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆಯೇ ಶಾಲೆ ಆರಂಭಕ್ಕೆ ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿಕೊಂಡಿತ್ತು.



