ಕಲಬುರ್ಗಿಜಿಲ್ಲಾ ಸುದ್ದಿ
ಕಾಲು ತೊಳೆಯಲು ಹೋಗಿ ನೀರು ಪಾಲಾದ ಯುವಕರು

ಕಲಬುರ್ಗಿ: ಕಾಲು ಜಾರಿ ನದಿಗೆ ಬಿದ್ದವನನ್ನ ರಕ್ಷಣೆ ಮಾಡಲು ಹೋಗಿ ಇಬ್ಬರು ನೀರು ಪಾಲಾಗಿರೋ ಘಟನೆ ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ಭೀಮಾನದಿಯಲ್ಲಿ ನಡೆದಿದೆ.
ಮೊದಲು ಸಂತೋಷ್ ಬಸನಾಳ ಎಂಬಾತ ಕಾಲು ತೊಳೆಯಲು ನದಿಗೆ ಇಳಿದು ಆಯಾತಪ್ಪಿ ನೀರಿನಲ್ಲಿ ಮುಳುಗುತ್ತಿದ್ದಾಗ ಆತನ ರಕ್ಷಣೆಗೆಂದು ರವಿ ಎಂಬಾತ ನೀರಿಗೆ ದುಮುಕಿದ್ದಾನೆ. ಆದ್ರೆ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರು ಜಾವಳ ಕಾರ್ಯಕ್ರಮಕ್ಕೆ ಅಂತ ಅಫಜಲಪುರಕ್ಕೆ ಬಂದಿದ್ರು. ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ನೀರುಪಾಲಾಗಿದ್ರಿಂದ ಸ್ಮಶಾನ ಮೌನ ಆವರಿಸಿದೆ. ನಿನ್ನೆ ಸಾಯಂಕಾಲ ಈ ಘಟನೆ ನಡೆದಿದೆ. ಇಬ್ಬರು 30 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದಾರೆ.
ನೀರು ಪಾಲಾದವರ ಪತ್ತೆಗೆ ನಿನ್ನೆಯಿಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂಧಿ ಹಾಗೂ ಮೀನುಗಾರರು ಸಹಾಯದಿಂದ ಹುಡುಕಾಟ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಓರ್ವ ಯುವಕನ ಶವ ಪತ್ತೆಯಾಗಿದೆ. ಮತ್ತೊರ್ವನ ಶವಕ್ಕಾಗಿ ಹುಡುಕಾಟ ನಡೆದಿದೆ.ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




