ಇತರ ಕ್ರೀಡೆಕೊಡಗುಕ್ರೀಡೆಜಿಲ್ಲಾ ಸುದ್ದಿ
ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿ – ಕೊಡಗಿನ ನಂದಿನಿ ಸಿ ವಿ ಆಯ್ಕೆ

ಕುಶಾಲನಗರ : ಕೊಡಗಿನ ಕುಶಾಲನಗರ ಸಮೀಪದ ನಂಜರಾಯಪಟ್ಟಣದ ನಂದಿನಿ.ಸಿ.ವಿ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಕೊಡಗಿನ ಕ್ರೀಡಾ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನಂಜರಾಯಪಟ್ಟಣದ ವಾಸು.ಸಿ.ಎಂ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ ರಾಷ್ಟ್ರ ಮಟ್ಟದ ಥೋ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಪೆಡ್ ವ್ಯಾಸಂಗ ಮಾಡುತ್ತಿದ್ದಾರೆ.
ಅ.29 ರಿಂದ 31 ರವರೆಗೆ ಹರಿಯಾಣದ ಎ.ಡಿ.ವಿ.ವಿ ಯಲ್ಲಿ ಕ್ರೀಡಾಕೂಟ ನಡೆಯಲಿದೆ




