ನೈತಿಕ ಪೊಲೀಸ್ ಗಿರಿಯ ಮತ್ತೊಂದು ವಿಡಿಯೋ ವೈರಲ್: ಕುಂದಾನಗರಿಯಲ್ಲಿ ಏನಾಗುತ್ತಿದೆ..?

ಬೆಳಗಾವಿ: ಕಳೆದ ಒಂದು ತಿಂಗಳಿಂದ ಅಂದರೆ ಅರ್ಬಾಜ್ ಕೊಲೆ ಪ್ರಕರಣದ ನಂತರ ಬೆಳಗಾವಿ ಸೇರಿದಂತೆ ಸುತ್ತಮುತ್ತ ನೈತಿಕ ಪೊಲೀಸಗಿರಿಯ ಪ್ರಕರಣಗಳು ಭಯನಕವಾಗಿ ವರದಿ ಆಗುತ್ತಿವೆ. ಮೂಲಗಳ ಮಾಹಿತಿಯಂತೆ ಅರ್ಬಾಜ್ ಕೊಲೆ ನಂತರ ಒಟ್ಟು ಐದು ಪ್ರಕರಣಗಳು ನಗರದಲ್ಲಿ ವರದಿಯಾಗಿವೆ. ಇವುಗಳಲ್ಲಿ ಒಂದು ಕೇಸ್ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಸಂಧಾನ ಮಾಡಿಸಿದ್ರೆ ಇನ್ನೊಂದು ಪ್ರಕರಣವನ್ನ ಅದೇ ಠಾಣೆಯ ಇನ್ಸ್ಪೆಕ್ಟರ್ ಅತ್ಯಂತ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ದಾಖಲಿಸಿ ಆರೋಪಿಗಳ ಬೇಟೆಗೆ ಇಳಿದಿದ್ದಾರೆ.
8 ದಿನದ ಹಿಂದೆ ಲೋಂಡಾ ಪಟ್ಟಣದ ಒಬ್ಬ ಹಿಂದೂ ಧರ್ಮದ ಯುವಕ ಇಬ್ಬರು ಮುಸ್ಲಿಂ ಯುವತಿಯರು ಜೊತೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸುತ್ತಾಡುತ್ತಿದ್ದ ವೇಳೆ ಕೆಲ ಆಟೋ ಚಾಲಕರು ಹಾಗು ಮುಸ್ಲಿಂ ಯುವಕರು ಅವರ ಮೇಲೆ ದೌರ್ಜನ್ಯ ಮೆರೆದಿದ್ದಾರೆ.
ವಿಡಿಯೊದಲ್ಲಿ ಕಾಣಿಸುವಂತೆ ಯುವಕನ್ನ ಪ್ರಶ್ನಿಸಿರುವ ಕಿರಾತಕರು ಯುವಕನಿಗೆ ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ, ಅಲ್ಲದೆ ಯುವತಿಯರನ್ನ ಸ್ಥಳೀಯ ದರ್ಗಾಕ್ಕೆ ಕರೆದುಕೊಂಡು ಹೋಗಿ ಅವಾಚ್ಯಾ ಶಬ್ದಗಳಿಂದ ನಿಂದಿಸಿ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಸದ್ಯ ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲಾ, ಆದ್ರೆ ಮುಂದಿನ ದಿನಗಳಲ್ಲಿ ಕೂಡ ಬೆಳಗಾವಿ ನಗರದಲ್ಲಿ ಯುವಕ ಯುವತಿಯರ ನಿರ್ಭಿತವಾಗಿ ಸಂಚರಿಸಲು ಇಲ್ಲಿ ಸಾಧ್ಯವಿಲ್ಲಾ ಎನ್ನುವುದು ಸ್ಪಷ್ಟವಾಗಿದೆ.
ಇನ್ನು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಡಿಸಿಪಿ ವಿಕ್ರಂ ಅಮಟೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದು, ತುರ್ತು ಪರಿಸ್ಥಿತಿಯ ಸಮಯದಲ್ಲಿ 112 ನಂಬರ್ ಗೆ ಕೂಡಲೇ ಕರೆಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.




