ಚಿಕ್ಕಮಗಳೂರುಜಿಲ್ಲಾ ಸುದ್ದಿ
ಚಿಕ್ಕಮಗಳೂರು: ನಾಲ್ಕು ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರು

ಚಿಕ್ಕಮಗಳೂರು : ನಗರದಲ್ಲಿ ಒಂದೇ ಕಟ್ಟಡದ ನಾಲ್ಕು ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.
ನಗರದ ಐ ಜಿ ರಸ್ತೆಯ ಗೋರೂರು ಬಿಲ್ಡಿಂಗ್ ನಲ್ಲಿ ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿದ್ದು, ಮೂರು ಅಂಗಡಿಯನ್ನ ತಡಕಾಡಿ, ನಾಲ್ಕನೇ ಅಂಗಡಿಯಲ್ಲಿ 77 ಸಾವಿರ ಹಣ ಕಳುವು ಮಾಡಿದ್ದಾರೆ. ಪಾರ್ಟೇಶನ್ ಗಾಜುಗಳನ್ನು ಒಡೆದಿರುವುದು ಕಂಡುಬಂದಿದೆ.
ಹಣದ ಜತೆ ಕೃಷಿ ಭೂಮಿ, ಸೈಟ್ ದಾಖಲೆಗಳೂ ಮಾಯವಾಗಿವೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.




