ಚಿಕ್ಕಮಗಳೂರು
ಆರೆಸ್ಸೆಸ್ ಆನೆಯಿದ್ದಂತೆ: ಸಿಟಿ ರವಿ

ಚಿಕ್ಕಮಗಳೂರು : ಆರೆಸ್ಸೆಸ್ ಆನೆ ಇದ್ದಂತೆ, ತನ್ನ ದಾರಿ ಕಡೆ ಹೋಗುತ್ತಿರುತ್ತದೆ. ಮಧ್ಯೆ ಯಾರೋ, ಏನೋ ಮಾತನಾಡುವರೆಂದು ತಲೆಕೆಡಿಸಿಕೊಳ್ಳದೆ ಆನೆ ಅದರ ಪಾಡಿಗೆ ಅದು ಹೋಗುತ್ತಿರುತ್ತದೆ ಎಂದು ಸಿ ಟಿ ರವಿ ಹೇಳಿದರು.
ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿ,ಆರೆಸ್ಸೆಸ್ ದೇಶಭಕ್ತ ಸಂಘಟನೆ, ಆ ಸಂಘಟನೆ ಇರುವ ಕಾರಣಕ್ಕೆ ಹಿಂದೂಗಳಲ್ಲಿ ಒಗ್ಗಟ್ಟು,
ರಾಷ್ಟ್ರೀಯತೆ ಇದೆ. ಇಲ್ಲದಿದ್ದರೆ ಜಾತಿ, ಪ್ರಾದೇಶಿಕ ಆಧಾರದ ಕಿತ್ತಾಟದಿಂದ ಮೂರನೇಯವರಿಗೆ ಲಾಭವಾಗುತ್ತಿತ್ತು. ಹಿಂದೆ ದೇಶದ ಮೇಲೆ ಅಕ್ರಮ ಮಾಡಿದವರು ತಮ್ಮ ಸಾಮರ್ಥ್ಯಕ್ಕಿಂತ ನಮ್ಮ ಒಡಕಿನ ಲಾಭದಲ್ಲಿ ಅಕ್ರಮಣ ಮಾಡಿದರು. ಈ ಸತ್ಯದ ಅರಿವಿದ್ದವರಿಗೆ ಆರೆಸ್ಸೆಸ್ ಅರ್ಥವಾಗುತ್ತದೆ ಎಂದರು.




