ಕೋಲಾರಜಿಲ್ಲಾ ಸುದ್ದಿ
ಕೋಲಾರ: ಸಾವಿರ ಗಡಿ ದಾಟಿದ 15 ಕೆ ಜಿ ಟೊಮೇಟೊ ಬಾಕ್ಸ್ನ ಬೆಲೆ

ಕೋಲಾರ: ಏಷ್ಯಾದ ಎರಡನೇ ಅತೀ ದೊಡ್ಡ ಟೊಮೇಟೊ ಮಾರುಕಟ್ಟೆ ಕೋಲಾರ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ನ ಬೆಲೆ ಸಾವಿರದ ಗಡಿ ದಾಟಿ ಸರ್ವಕಾಲಿಕ ದಾಖಲೆ ಬರೆದಿದೆ.
ಸತತ ಒಂದೂವರೆ ವರ್ಷದಿಂದ ಕೋಲಾರದ ಟೊಮೇಟೊ ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ತೀವ್ರ ಕುಸಿತ ಕಂಡಿದ್ದು ರೈತರು ನಷ್ಟಕ್ಕೀಡಾಗಿದ್ದರು ಆದರೆ ಇತ್ತೀಚೆಗೆ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಬೀಳುತ್ತಿರುವ ಧಾರಾಕಾರ ಮಳೆಗೆ ಟೊಮೇಟೊ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಮಾರುಕಟ್ಟೆಯಲ್ಲಿ ಟೊಮೇಟೊ ಬೇಡಿಕೆ ಹೆಚ್ಚಾಗಿರುವ ಕಾರಣ ಟೊಮೇಟೊ ಬೆಲೆ ಗಗನಕ್ಕೇರಿದೆ.
ಕೋಲಾರ ಮಾರುಕಟ್ಟೆಯಲ್ಲಿನ ಟೊಮೇಟೊ ಆಂದ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಿಗೂ ಕೋಲಾರದಿಂದಲೇ ಟೊಮೇಟೊ ಸರಬರಾಜು ಆಗುತ್ತಿದೆ.
ಕಳೆದ ಒಂದೂವರೆ ವರ್ಷದಿಂದ ಟೊಮೇಟೊ ಬೆಲೆ ಕುಸಿತದಿಂದ ಟಮೋಟ ಬೆಳೆಗಾರರಲ್ಲಿ ಟೊಮೇಟೊ ಬೆಳೆಯ ಬಗ್ಗೆಯೇ ಜಿಗುಪ್ಸೆ ಬಂದಿತ್ತು ಆದರೀಗ ದಿಢೀರ್ ಬೆಲೆಯೇರಿಕೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.




