ರಾಷ್ಟ್ರೀಯ

ಹರ್ಯಾಣದಲ್ಲಿ ಮುಂದುವರಿದ ರೈತ ಹೋರಾಟ; ಬಂಧಿತ ರೈತರ ಬಿಡುಗಡೆಗೆ ಒತ್ತಾಯ

ಹರ್ಯಾಣದಲ್ಲಿ ಬಂಧಿತ ರೈತರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರೈತಮುಖಂಡ ರಾಕೇಶ್ ಟಿಕಾಯತ್, ಗುರ್ನಮ್ ಸಿಂಗ್ ಚಾದುನಿ ಹಾಗೂ ಯುನೈಟೆಡ್ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ತೋಹಾನಾದ ಪೊಲೀಸ್ ಠಾಣೆ ಮುಂದೆ ರೈತರು ಪ್ರತಿಭಟನೆ ಮುಂದಿವರಿದಿದೆ.

ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಚಳವಳಿಯ ಭಾಗವಾಗಿ ಕಳೆದ ವಾರ ರೈತರು ಹರ್ಯಾಣದ ಪತೇಹಾಬಾದ್ನ ತೋಹಾನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಜೆಪಿಯ ಶಾಸಕ ದೇವೇಂದ್ರ ಸಿಂಗ್ ಬಬ್ಲಿ ಮನೆಗೆ ಮುತ್ತಿಗೆ ಹಾಕಿದ ಬಳಿಕ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತಮುಖಂಡರಾದ ವಿಕಾಸ್ ನಿಸಾರ್ ಹಾಗೂ ರವಿ ಆಝಾದ್ ಎಂಬವರನ್ನು ಬಂಧಿಸಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button